ಪುತ್ತೂರು: ಪಿಎಫ್ ಐ ಹಾಗೂ ಎಸ್.ಡಿ.ಪಿ.ಐ. ಕಾರ್ಯಕರ್ತರ ಅಕ್ರಮ ಬಂಧನವನ್ನು ಖಂಡಿಸಿ ಮತ್ತು ಬಂಧಿತರ ಬಿಡುಗಡೆಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ದೌರ್ಜನ್ಯ ನಡೆಸಿದ ಕ್ರತ್ಯವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.
ಬಂದಿತರ ಬಿಡುಗಡೆಗಾಗಿ ಶಾಂತಿಯಿಂದಲೇ ನಡೆಯುತ್ತಿದ್ದ ಪ್ರತಿಭಟನಾಕಾರರನ್ನು ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಎಂಬವರು ನಮ್ಮ ಬಳಿ ಲಾಠಿ ಇದೆ,ಎ.ಕೆ ,47 ಇದೆ,ಪಿಸ್ತೂಲ್ ಇದೆ ಇತ್ಯಾದಿ ಹೇಳಿ ಪ್ರಚೋದನೆ ನಡೆಸಿದ್ದಾರೆ ಹಾಗಿದ್ದೂ ಪ್ರತಿಭಟನಾಕಾರರು ಪ್ರಭುದ್ಧತೆ ಮೆರೆದಿರುವುದು ಶ್ಲಾಘನೀಯ.
ಮಾತುಕತೆ ವಿಫಲವಾದರೆ ಪ್ರತಿಭಟನೆಯನ್ನು ಮುಂದುವರಿಸುವ ಹಕ್ಕು ಪ್ರತಿಭಟನಾಕಾರರಿಗೆ ಇದೆ. ಆದರೆ ಪೊಲೀಸರು ಸಂಘ ಪರಿವಾರದ ಒತ್ತಡಕ್ಕೆ ಮಣಿದು ಯಾವುದೇ ಮುನ್ಸೂಚನೆಯನ್ನು ನೀಡದೆ ಬೀದಿ ದೀಪಗಳನ್ನು ಆರಿಸಿ ಕತ್ತಲಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪ್ರತಿಭಟನೆಯನ್ನು ಹತ್ತಿಕ್ಕಿದೆ.
ಉದ್ರಿಕ್ತ ಗುಂಪನ್ನು ಚದುರಿಸಲು ಅನಿವಾರ್ಯ ಸಂದರ್ಭಗಳಲ್ಲಿ ಸೊಂಟದ ಕೆಳಗಡೆ ಲಾಠಿ ಚಾರ್ಜ್ ಮಾಡುವ ನಿಯಮವಿದೆಯೇ ಹೊರತು ಶಾಂತವಾಗಿ ಪ್ರತಿಭಟಿಸುತ್ತಿದ್ದವರ ಮೇಲಲ್ಲ, ಆದರೆ ಪೋಲೀಸರು ಉದ್ದೇಶಪೂರ್ವಕವಾಗಿಯೇ ಶಾಂತವಾಗಿ ಪ್ರತಿಭಟಿಸುತ್ತಿದ್ದವರ ತಲೆ ಹಾಗೂ ಇತರ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಲಾಠಿಯನ್ನು ಬಳಸುವಲ್ಲಿ ಮಾಡಿದ ತಾರತಮ್ಯ ನೀತಿಯು ಖಂಡನೀಯ.
ಆದ್ದರಿಂದ ಮಾರಣಾಂತಿಕ ಹಲ್ಲೆಗಳನ್ನು ನಡೆಸಿದಂತಹ ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನಕುಮಾರ್ , ಬೆಳ್ತಂಗಡಿ ಠಾಣಾ ಧಿಕಾರಿ ನಂದಕುಮಾರ್, ಬಂಟ್ವಾಳ ಸಿಬ್ಬಂದಿ ಬಸಪ್ಪ
ಮತ್ತಿತರ ಅಧಿಕಾರಿಗಳನ್ನು ಅಮಾನತು ಪಡಿಸಬೇಕು ಹಾಗೂ ಒಟ್ಟು ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಸೂಕ್ತ ತನಿಖೆ ನಡೆಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.