ಖಾಸಗಿ ವಿಮಾನ ಪತನ| ಒಂಬತ್ತು ಮಂದಿ ಸಾವು
Prasthutha: December 16, 2021

ಸಾಂದರ್ಭಿಕ ಚಿತ್ರ
ಸ್ಯಾಂಟೋ ಡೊಮಿಂಗೊ: ಖಾಸಗಿ ವಿಮಾನವೊಂದು ಪತನಗೊಂಡು ಒಂಬತ್ತು ಮಂದಿ ಮೃತಪಟ್ಟ ಘಟನೆ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೋ ಡೊಮಿಂಗೊದಲ್ಲಿರುವ ಲಾಸ್ ಅಮೆರಿಕಾಸ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಫ್ಲೋರಿಡಾಗೆ ಹೊರಟ ವಿಮಾನವು ಟೇಕ್ ಆಫ್ ಆದ 15 ನಿಮಿಷದಲ್ಲೇ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಪತನಗೊಂಡಿದೆ ಎಂದು ತಿಳಿದುಬಂದಿದೆ.
