ಬಟ್ಟೆಯಿಂದ ಪ್ರಜೆಗಳನ್ನು ವಿಭಜಿಸುವವರು ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತಾರೆ?: ಪ್ರಧಾನಿಯನ್ನು ಟೀಕಿಸಿದ ನಟ ಕಿಶೋರ್

Prasthutha|

ಬೆಂಗಳೂರು: ರೈಲ್ವೇ ಹಳಿ ಹಾನಿಗೀಡಾಗಿರುವುದನ್ನು ಕಂಡು ತನ್ನ ಬಟ್ಟೆಯನ್ನೇ ಬಿಚ್ಚಿ ರೈಲು ಚಾಲಕನಿಗೆ ಸಿಗ್ನಲ್ ಕೊಟ್ಟು ಭಾರೀ ಅವಘಡವನ್ನು ತಪ್ಪಿಸಿದ ಬಾಲಕ ಮುರ್ಸಲಿನ್ ಶೇಖ್ ಸಮಯಪ್ರಜ್ಞೆಗೆ ನಟ ಕಿಶೋರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

ಬಟ್ಟೆ ನೋಡಿ ಅವರನ್ನು ಗುರುತಿಸಬಹುದು ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ನಟ ಕಿಶೋರ್

- Advertisement -

ಭಲೇ ಬಾಲಕ, ನಮಗೆಲ್ಲ ಮಾದರಿಯಾದೆ ನೀನು..
ಒಮ್ಮೆ ಯೋಚಿಸಿ..
ಇವರೇನಾದರೂ ಬಟ್ಟೆಯಿಂದ ಈ ಬಾಲಕನನ್ನು ಗುರುತಿಸಿಬಿಟ್ಟಿದ್ದರೆ?
ಆ ರೈಲಿನ ಚಾಲಕ ದಿನಕ್ಕೊಂದು ವಂದೇಭಾರತ ರೈಲು ಬಿಡುವ ಪ್ರಧಾನ ಸೇವಕನಾಗಿದ್ದಿದ್ದರೆ??
ರೈಲನ್ನು ಸೀದಾ ಪಾಕಿಸ್ಥಾನಕ್ಕೇ ನುಗ್ಗಿಸಿಬಿಡುತ್ತಿದ್ದನೇನೊ??
ತನ್ನ ಸ್ಥಾನದ ಗೌರವ ಘನತೆಯ ಅರಿವಿಲ್ಲದೆ, ಬಟ್ಟೆಯಿಂದ ಭವ್ಯಭಾರತದ ಪ್ರಜೆಗಳನ್ನು ವಿಭಜಿಸುವ ನಾಚಿಕೆಗೇಡು ಸಣ್ಣತನ ಬಿಟ್ಟು ರೈಲಿನೊಳಗಿರುವವರು ಯಾವ ಬಟ್ಟೆಯವರು ಎಂದು ಯೋಚಿಸದೆ ಜೀವ ಉಳಿಸಿದ ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತೀರೇ?
ಈ ಬಾಲಕನಿಗೆ ಶಾಲೆಯ ಮಕ್ಕಳೆಲ್ಲರ ಕೈಲಿ ಕಪಾಳಕ್ಕೆ ಹೊಡೆಸುವ, ದನ ತಿಂದರೆಂದು ಇವನ ಕೋಮಿನ ಮನುಷ್ಯರನ್ನೇ ಸಜೀವದಹನ ಮಾಡುವ ಧರ್ಮಾಂಧರಾಗುವುದ ಬಿಟ್ಟು ಮನುಷ್ಯರಾದೀರೇ? ಹಳಿತಪ್ಪಿ ಹೊರಟ ನಮ್ಮ ಜೀವನವನ್ನು ಸರಿದಾರಿಗೆ ತಂದೀರೇ?

Join Whatsapp