‘ಶಕ್ತಿ’ ಯೋಜನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತೇವೆ: ರಾಮಲಿಂಗಾರೆಡ್ಡಿ

Prasthutha|

ರಾಮನಗರ: ‘ಶಕ್ತಿ’ ಯೋಜನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 24 ಸಾವಿರ ಬಸ್, 1.54 ಸಾವಿರ ಟ್ರಿಪ್ ಗಳಿದೆ. ಸದ್ಯ ಬೆಂಗಳೂರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಸಮಸ್ಯೆಯಿಲ್ಲ. ಧಾರ್ಮಿಕ ಕ್ಷೇತ್ರ ಸೇರಿ ಕೆಲ ಕಡೆಗಳಲ್ಲಿ ಸಮಸ್ಯೆಯಿದೆ. ಸಮಸ್ಯೆ ಇರುವ ಕಡೆ ಬಗೆಹರಿಸುವ ಕೆಲಸವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.


ಹೊಸದಾಗಿ ಕಾರ್ಯಕ್ರಮವಾದಾಗ ಜನ ಹೆಚ್ಚಾಗಿ ಬರುವುದು ಸಹಜ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದರು.
ಶಕ್ತಿ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಅಲ್ಲಿಯವರೆಗೂ ತಮ್ಮ ದಾಖಲಾತಿ ತೋರಿಸಿ ಓಡಾಟ ಮಾಡಬಹುದು. ಅಲ್ಲದೇ ಗೃಹಜ್ಯೋತಿಗೂ ಅರ್ಜಿ ಸಲ್ಲಿಕೆಯಾಗುತ್ತಿದೆ. ಇನ್ನೇನು ಗೃಹಲಕ್ಷ್ಮಿ ಯೋಜನೆಗೂ ಅರ್ಜಿ ಸ್ವೀಕರಿಸಲಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಯೋಜನೆ ಜಾರಿ ಮಾಡುತ್ತೇವೆ ಎಂದರು.

Join Whatsapp