ಮುನಾವರ್ ಫಾರೂಕಿ ಪ್ರದರ್ಶನಕ್ಕೆ ಹೈದರಾಬಾದ್ ನಲ್ಲಿ ಅವಕಾಶ ನೀಡುವುದಿಲ್ಲ: ಬಿಜೆಪಿ ಸಂಸದ ಅರವಿಂದ್
Prasthutha: December 24, 2021

ಹೈದರಾಬಾದ್: ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರ ಹೈದರಾಬಾದ್ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ತೆಲಂಗಾಣ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಬೆದರಿಕೆ ಹಾಕಿದ್ದಾರೆ.
ಫಾರೂಕಿ ಅವರಿಗೆ ಪ್ರದರ್ಶನ ನೀಡುವಂತೆ ಆಹ್ವಾನಿಸಿದ ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾಮ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಹಿಂದೂ ದೇವ ದೇವತೆಗಳನ್ನು ಅವಮಾನಿಸುವ ಮುನಾವರ್ ಫಾರೂಕಿ ಅವರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧವಿದೆ. ಈ ನಿಟ್ಟಿನಲ್ಲಿ ಕೆ.ಟಿ. ರಾಮರಾಮ್ ಅವರು ತೆಲಂಗಾಣ ಕಾರ್ಯಕ್ರಮಕ್ಕೆ ಫಾರೂಕಿಯನ್ನು ಆಹ್ವಾನ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.
ಈ ಮಧ್ಯೆ ಕೆ.ಟಿ. ರಾಮರಾವ್ ಅವರು ಮುನಾವರ್ ಫಾರೂಕಿ ಮತ್ತು ಕುನಾಲ್ ಕಮ್ರಾ ಸೇರಿದಂತೆ ಹಲವು ಹಾಸ್ಯ ಕಲಾವಿದರಿಗೆ ಹೈದರಾಬಾದ್ ನಲ್ಲಿ ಪ್ರದರ್ಶನ ನೀಡಲು ಮುಕ್ತ ಆಹ್ವಾನ ಇದೆ ಎಂದು ಹೇಳಿಕೆ ನೀಡಿದ್ದರು.
