ನಾನು ಬಿಜೆಪಿಗೆ ಹೋದಾಗ ಶುದ್ಧ, ಕಾಂಗ್ರೆಸ್‌ಗೆ ಬಂದಾಗ ಅವಕಾಶವಾದಿ ಆಗುತ್ತೇನೆಯೇ?: ಜಯಪ್ರಕಾಶ್ ಹೆಗ್ಡೆ

Prasthutha|

ಚಿಕ್ಕಮಗಳೂರು: ನಾನು ಬಿಜೆಪಿಗೆ ಹೋದಾಗ ಶುದ್ಧ, ಕಾಂಗ್ರೆಸ್‌ಗೆ ಬಂದ ಕೂಡಲೇ ಅವಕಾಶವಾದಿ ಆಗೋದು ಹೇಗೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದ್ದಾರೆ.

- Advertisement -

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆ ಎದುರಿಸುವ ಭಯದಲ್ಲಿ ಬಿಜೆಪಿ ಮುಖಂಡರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದರು.

ನನ್ನ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಗೆದ್ದಾಗ ಮಾಡಿದ ಕೆಲಸವನ್ನು ಸೋತಾಗಲೂ ಮಾಡಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಈ ಆರೋಪ ಮಾಡುತ್ತಿಲ್ಲ. ನಮಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ವಿರೋಧ ಪಕ್ಷದ ಕೆಲವರು ಮಾತ್ರ ಅವಕಾಶವಾದಿ ಎಂಬ ಆರೋಪ ಮಾಡುತ್ತಿದ್ದಾರೆ ಎಂದರು.

- Advertisement -

ಕಾಂಗ್ರೆಸ್‌ಗೆ ನಾನಾಗಿಯೇ ಬಂದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದ್ದೇನೆ. ಆ ಕಾರಣ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇನೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ತುಮಕೂರು-ಶಿವಮೊಗ್ಗ, ಕಡೂರು-ಮೂಡಿಗೆರೆ, ಶಿವಮೊಗ್ಗ-ಮಲ್ಪೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಾಂಗ್ರೆಸ್ ಅವಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿತ್ತು. 10 ವರ್ಷವಾದರೂ ಈವರೆಗೆ ಕಾಮಗಾರಿ ಮುಕ್ತಾಯವಾಗಿಲ್ಲ. ಸಂಸದರು ಕೇಂದ್ರ ಸ್ಥಾನದಲ್ಲಿರುವುದು ಮುಖ್ಯವಲ್ಲ. ಆಯ್ಕೆ ಮಾಡಿದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿದರು.

Join Whatsapp