ಬಿಜೆಪಿ ಬಿಟ್ಟು ‘ಕೈ’ ಹಿಡಿಯುತ್ತಾರಾ ಹೆಚ್. ವಿಶ್ವನಾಥ್?: ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಭೇಟಿ

Prasthutha|

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಇಂದು ಮಧ್ಯಾಹ್ನ ಶಿವಾನಂದ ವೃತ್ತದ ಸಮೀಪ ಇರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

- Advertisement -


ಮೂಲಗಳ ಪ್ರಕಾರ, ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ವಿಶ್ವನಾಥ್ ಆಗಮಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ನಡೆಯಿಂದ ಬೇಸತ್ತಿರುವ ಹೆಚ್. ವಿಶ್ವನಾಥ್ ಕಾಂಗ್ರೆಸ್’ಗೆ ಮರಳಲು ನಿರ್ಧರಿಸಿದ್ದು, ಮೈಸೂರಿನಿಂದಲೇ ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸಲು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Join Whatsapp