2021ನೇ ಸಾಲಿನ ಏಕಲವ್ಯ, ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ

Prasthutha|

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ರಾಜ್ಯ ಸರ್ಕಾರದಿಂದ ನೀಡುವ  2021ನೇ ಸಾಲಿನ ‘ಏಕಲವ್ಯ’ ಜೀವಮಾನ ಸಾಧನೆ ಹಾಗೂ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

- Advertisement -

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ  2022-23 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ, 36 ನೇ ರಾಷ್ಟ್ರೀಯ ಕ್ರೀಡಾಕೂಟದ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 

- Advertisement -

ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಯುವ ಸಾಧಕರು  ದೇಶದ ಅತ್ಯುನ್ನತ ಆಸ್ತಿಗಳು ಮತ್ತು ಪ್ರೇರಕ ಶಕ್ತಿಗಳು ಎಂದರು.

ಏನಾದರೂ ಸಾಧನೆ ಮಾಡಬೇಕಾದರೆ ಅದರ ಹಿಂದೆ ದೊಡ್ಡ ಪರಿಶ್ರಮವಿರುತ್ತದೆ. ಏಕಾಗ್ರತೆಯಿಂದ ಪರಿಶ್ರಮ ಪಟ್ಟರೆ ಯಶಸ್ಸು ಸಾಧ್ಯವಾಗುತ್ತದೆ. ಪ್ರಥಮ ಬಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರೀಡೆಗೆ ಮಹತ್ವ ಕೊಡುತ್ತಿದೆ. ಕ್ರೀಡೆ ಒಂದು ಹವ್ಯಾಸವಾಗಿ ಪ್ರಾರಂಭಗೊಂಡು ಇವತ್ತು ರಾಷ್ಟ್ರೀಯ ಸಂಕೇತವಾಗಿ ಬೇರೆ ಬೇರೆ ರಾಷ್ಟ್ರಗಳನ್ನು ಕ್ರೀಡೆಯ ಸಾಧನೆಯ ಸರಣಿಯಲ್ಲಿ ನೋಡಲಾಗುತ್ತಿದೆ. ಹೀಗಾಗಿ ಒಂದು ರಾಷ್ಟ್ರವಾಗಿ ಕ್ರೀಡೆಯನ್ನು ಯೋಜನೆಯಾಗಿ ಪ್ರಮುಖವಾಗಿ ತರುವ ಅಗತ್ಯವಿದೆ ಎಂದರು.

Join Whatsapp