ಟರ್ಕಿಯಲ್ಲಿ ಕಾಡ್ಗಿಚ್ಚು: ಭೀಕರತೆಯನ್ನು ವಿವರಿಸುತ್ತಿವೆ ಚಿತ್ರಗಳು

Prasthutha|

ಟರ್ಕಿ, ಜು, 31: ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಒಟ್ಟು ಆರು ಮಂದಿ ಬಲಿಯಾಗಿದ್ದಾರೆ. ದೇಶದ ಒಟ್ಟು 98 ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹಬ್ಬಿದ್ದು ಅದರಲ್ಲಿ 88 ಅರಣ್ಯಗಳ ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿದೆ ಎಂದು ಟರ್ಕಿಯ ಕೃಷಿ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ. ಉಳಿದ ಹತ್ತು ಅರಣ್ಯಗಳ ಬೆಂಕಿಯನ್ನೂ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದ್ದು, ಶೀಘ್ರದಲ್ಲಿ ಆ ಪ್ರಯತ್ನದಲ್ಲೂ ಯಶಸ್ವಿಯಾಗಬಹುದು ಎಂಬ ಆಶಾಭಾವವನ್ನು ಸಚಿವಾಲಯ ವ್ಯಕ್ತಪಡಿಸಿದೆ. 

- Advertisement -

ಅಂಟಾಲ್ಯಾ, ಅಡಾನಾ, ಮುಗ್ಲಾ, ಒಸ್ಮಾನಿಯೇ ಪ್ರದೇಶದ ಅರಣ್ಯಗಳು ಬೆಂಕಿಗಾಹುತಿಯಾಗಿವೆ. ಇದರಿಂದಾಗಿ ಅಪಾರ ಪ್ರಮಾಣದ ಕೃಷಿ ಭೂಮಿ, ಸಣ್ಣ ಗ್ರಾಮಗಳು, ವನ್ಯ ಸಂಪತ್ತು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಟರ್ಕಿಯ ಕಾಡ್ಗಿಚ್ಚನ್ನು ನಂದಿಸಲು ತೀವ್ರತರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಕಳೆದ ಮೂರು ದಿನಗಳಿಂದ ಹಬ್ಬಿರುವ ಬೆಂಕಿಯಿಂದ ಅಪಾರ ಪ್ರಮಾಣದ ವನ್ಯ- ಜೀವಿ ಸಂಪತ್ತು ನಾಶವಾಗಿದೆ.


ಟರ್ಕಿಯ ಕಾಡ್ಗಿಚ್ಚನ್ನು ವಿವರಿಸುತ್ತಿರುವ ಚಿತ್ರಗಳು



Join Whatsapp