►ಬೆಡ್ ಇರಿಸಿ ಯುವತಿಯ ಜೀವ ಉಳಿಸಿದ ಇತರ ಫ್ಲ್ಯಾಟ್ ನಿವಾಸಿಗಳು!
ಲಕ್ನೋ: ಉತ್ತರ ಪ್ರದೇಶದ ಗಾಝಿಯಾಬಾದ್ ನ ಫ್ಲ್ಯಾಟೊಂದರ 9ನೇ ಮಹಡಿಯಿಂದ ಯುವತಿಯೊಬ್ಬಳು ಬೀಳುತ್ತಿರುವ ವೀಡಿಯೋ ಈಗ ವೈರಲಾಗಿದೆ. ಕೆಳಗೆ ಜಿಗಿಯುತ್ತಿದ್ದಾಗ ರಕ್ಷಿಸಲು ಪ್ರಯತ್ನಿಸಿದ ಗಂಡನ ಕೈಯಲ್ಲಿ ಮೂರು ನಿಮಿಷ ನೆತಾಡಿದ ಯುವತಿ ಜಾರಿ ಬಿದ್ದು ಈಗ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯುವತಿ ತನ್ನ ಗಂಡನೊಂದಿಗೆ ಜಗಳವಾಡಿ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಯುವತಿ ಬಾಲ್ಕನಿಯ ಕಂಬಿಯ ಮೇಲೆ ಹತ್ತಿ ಕೆಳಗೆ ಜಿಗಿಯುವುದನ್ನು ನೋಡಿ ಆಘಾತಗೊಂಡ ಪತಿ ತಕ್ಷಣ ರಕ್ಷಿಸಲು ಮುಂದಾಗಿದ್ದು, ಪತ್ನಿಯ ಕೈಯನ್ನು ಮೂರು ನಿಮಿಷಗಳ ಕಾಲ ಹಿಡಿದು ಮೇಲಕ್ಕೆ ಎಳೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಪತಿಯ ಪ್ರಯತ್ನ ವಿಫಲವಾಗಿ ಯುವತಿ ಕೆಳಗೆ ಬೀಳುವ ದೃಶ್ಯ ವೀಡಿಯೋದಲ್ಲಿ ಕಾಣಬಹುದು.
ವೀಡಿಯೋ ವೀಕ್ಷಿಸಿ….
ಯುವತಿ ಜಿಗಿಯುವುದನ್ನು ನೋಡಿದ ಫ್ಲಾಟ್ ನ ಇತರ ನಿವಾಸಿಗಳು ಕೆಳಗೆ ಹಾಸಿಗೆಯನ್ನು ಸಿದ್ಧಪಡಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಯುವತಿ ಹಾಸಿಗೆ ಮೇಲೆ ಬಿದ್ದಿದ್ದರೂ 9ನೇ ಮಹಡಿಯಿಂದ ಬೀಳುವ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.