ದೇಶದ್ರೋಹ ಪ್ರಕರಣ: ಕರ್ನಾಟಕದಲ್ಲೇ ಅತಿ ಹೆಚ್ಚು ಕೇಸು ದಾಖಲು

Prasthutha: July 15, 2021

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಬರೆದ ಕಾರಣಕ್ಕಾಗಿ ದೇಶದ್ರೋಹ ಪ್ರಕರಣ ದಾಖಲಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದರೆ, ಯುಪಿ ದ್ವಿತೀಯ ಸ್ಥಾನದಲ್ಲಿದೆ.


ದೇಶಾದ್ಯಂತ ದೇಶದ್ರೋಹ ಪ್ರಕರಣಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸುಪ್ರೀಮ್ ಕೋರ್ಟ್ ದೇಶದ್ರೋಹ ಕಾನೂನನ್ನು ಪರಿಶೀಲನೆ ನಡೆಸಿ ಕೈಬಿಡುವುದರ ಕುರಿತು ಕೇಂದ್ರವನ್ನು ಪ್ರಶ್ನಿಸಿದ್ದರ ಬೆನ್ನಲ್ಲಿಯೇ ಕರ್ನಾಟಕದಲ್ಲಿ ಹಲವಾರು ದೇಶದ್ರೋಹದ ಸುಳ್ಳು ಪ್ರಕರಣಗಳು ಅಂಕಿಅಂಶಗಳೊಂದಿಗೆ ಬೆಳಕಿಗೆ ಬಂದಿದೆ.


ಭಾರತದಾದ್ಯಂತ, ಆಡಿಯೊಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ರಚಿಸಿದ್ದಕ್ಕಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ 152 ಜನರ ವಿರುದ್ಧ 102 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 55.9% ರಷ್ಟು ಕರ್ನಾಟಕ ಮತ್ತು ಯುಪಿಯಲ್ಲಿ ದಾಖಲಾಗಿವೆ.


ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ನಿತರ ಸಾಫ್ಟ್ ವೇರ್ ಗಳ ಮೂಲಕ ಮಾಡಲಾದ ಪೋಸ್ಟ್ ಗಳನ್ನು ಆಧರಿಸಿ ಪ್ರಕರಣ ದಾಖಲಾಗಿದೆ. ದೇಶದ್ರೋಹದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ 23 ಫೆಬ್ರವರಿ 2021 ರಂದು ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿ 137 ದಿನಗಳು ಕಳೆದಿವೆ. ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ ಇಬ್ಬರು ಪತ್ರಕರ್ತರಾದ ಕಿಶೋರ್ ಚಂದ್ರ ವಾಂಗ್ಚೆಮ್ ಮತ್ತು ಕನ್ಹಯ್ಯ ಲಾಲ್ ಶುಕ್ಲಾ ಈ ಪ್ರಕರಣದಲ್ಲಿ ಅರ್ಜಿದಾರರು.


ಪೆಬ್ರವರಿ 27, 2019 ರಂದು ಕರ್ನಾಟಕದ ಒಂದು ಹಳ್ಳಿಯಲ್ಲಿ ಕೋಳಿ ಅಂಗಡಿ ಮಾಲಕರಾದ ಜುನೈದ್ 21 (ಹೆಸರು ಬದಲಾಯಿಸಲಾಗಿದೆ) ಫೇಸ್ ಬುಕ್ ನಲ್ಲಿ ಪಾಕಿಸ್ತಾನ ಸೈನಿಕರಿಗೆ ಬೆಂಬಲ ನೀಡಿದ್ದಾರೆ ಎಂಬ ನೆಪವೊಡ್ಡಿ 1880 ರಲ್ಲಿ ಚಾಲ್ತಿಯಲ್ಲಿದ್ದ 124 ಎ ಮತ್ತು 153 ದೇಶದ್ರೋಹ ಪ್ರಕರಣ ದಾಖಲಿಸಿ ಸರಿಸುಮಾರು 4 ತಿಂಗಳು 10 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು.
ಬಿಡುಗಡೆಯಾದ ನಂತರ ಊರಿಗೆ ಮರಳಿದ ಜುನೈದ್ ಗೆ ದೇಶದ್ರೋಹದ ಪಟ್ಟ ಕಟ್ಟಲಾಗಿತ್ತು. ಪೊಲೀಸ್ ಅಧೀಕ್ಷಕರು ಸ್ವಯಂ ಪ್ರೇರಿತವಾಗಿ 124 ಎ ಮತ್ತು 153 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ದರು. ಇಂತಹದೇ ಆರೋಪದಡಿಯಲ್ಲಿ ಕರ್ನಾಟಕ ಪೊಲೀಸರು ಹಲವಾರು ಯುವಕರನ್ನು 124 ಎ ಸೆಕ್ಷನ್ ದೇಶದ್ರೋಹದ ಸುಳ್ಳು ಕೇಸ್ ಹಾಕಿ ಬಂಧಿಸಿದ್ದಾರೆ. ಅದರಲ್ಲಿ ಹೆಚ್ಚಿನವು ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಹಾಕಿದ ಕಾರಣಕ್ಕೆ ನಡೆದಿದೆಯೆಂಬುದು ಗಮನಾರ್ಹ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ