ಪತಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಗೆ ಸಿಲುಕಿ ಪತ್ನಿ ಸಾವು

Prasthutha|

ಕೋಲಾರ: ಜಮೀನಿನಲ್ಲಿ ಪತಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ರೋಟರೇಟರ್ ಗೆ ಸಿಲುಕಿ ಪತ್ನಿ ಮೃತಪಟ್ಟ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ.
ರಾಜೇಶ್ ಎಂಬವರ ಪತ್ನಿ ಸೌಮ್ಯಾ (35) ಮೃತಪಟ್ಟವರು ಎಂದು ತಿಳಿದು ಬಂದಿದೆ.
ರಾಜೇಶ್ ಟ್ರ್ಯಾಕ್ಟರ್ ರೋಟರೇಟರ್ ನಲ್ಲಿ ಉಳುಮೆ ಮಾಡುತ್ತಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಗೆ ಕರೆ ಬಂದಿದ್ದರಿಂದ ಸೌಮ್ಯಾ ಪತಿಗೆ ಮೊಬೈಲ್ ನೀಡಲು ಟ್ರ್ಯಾಕ್ಟರ್ ಬಳಿ ಬಂದಿದ್ದಾರೆ. ಆಗ ಆಕಸ್ಮಿಕವಾಗಿ ಸೌಮ್ಯಾ ಅವರ ಸೀರೆಯ ಸೆರಗು ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದೆ. ಇದರಿಂದ ಟ್ರ್ಯಾಕ್ಟರ್ ನಡಿಗೆ ಸೆಳೆಯಲ್ಪಟ್ಟ ಸೌಮ್ಯಾರ ದೇಹ ಛಿದ್ರ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ವೇಮಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp