ಖಾತೆಯಿಂದ ದುಡ್ಡು ಹಿಂಪಡೆದಕ್ಕಾಗಿ ನಟ ಪತಿಯ ವಿರುದ್ದ ಠಾಣೆ ಮೆಟ್ಟಿಲೇರಿದ ಪತ್ನಿ

Prasthutha|

ಮುಂಬೈ : ಟಿವಿ ನಟ ಕರಣ್ ಮೆಹ್ರಾ ವಿರುದ್ದ ಅವರ ಪತ್ನಿ ನಿಶಾ ಅವರು ತಮ್ಮ ಪತಿ ತನಗೆ ತಿಳಿಯದಂತೆ ತನ್ನ ಬ್ಯಾಂಕ್ ಖಾತೆಯಿಂದ 1 ಕೋಟಿ ರೂ ಗಳನ್ನು ಹಿಂದೆಗೆದುಕೊಂಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದಾರೆ.

- Advertisement -

ತನ್ನ ಖಾತೆಯಿಂದ 1 ಕೋಟಿ ರೂ.ಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿದ ನಂತರ, ಅವರು ಶುಕ್ರವಾರ ರಾತ್ರಿ ಗೊರೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ನಟ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಮೇ 21 ರಂದು, ಮೆಹ್ರಾ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೊರೆಗಾಂವ್ ಪೊಲೀಸರು ಅವರನ್ನು ಬಂಧಿಸಿದ್ದರು. ನಂತರ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಈ ದಂಪತಿ ಮದುವೆಯಾಗಿ 8 ವರ್ಷಗಳಾಗಿವೆ ಮತ್ತು ಅವರಿಗೆ 4 ವರ್ಷದ ಮಗನಿದ್ದಾನೆ. ನಿಶಾ ತನ್ನ ನಟ ಪತಿಯ ವಿರುದ್ಧ ಪೊಲೀಸರನ್ನು ಸಂಪರ್ಕಿಸಿದ್ದು ಇದು ಎರಡನೇ ಬಾರಿಯಾಗಿದೆ.



Join Whatsapp