ವ್ಯಾಪಕ ಮಳೆ ಹಿನ್ನೆಲೆ; ರಸ್ತೆಗೆ ಉರುಳಿದ ಬೃಹತ್ ಬಂಡೆ

Prasthutha|

ಶಿವಮೊಗ್ಗ: ಸೋಮವಾರ ಸುರಿದ ವ್ಯಾಪಕ ಮಳೆಯಿಂದಾಗಿ ರಸ್ತೆ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಹಿಲ್ಕುಂಜಿ ಸುಳುಗೋಡು ಸಂಪರ್ಕ ಕಡಿತಗೊಂಡಿದೆ.

- Advertisement -

ಇದು ಆಗರಬೈಲು, ಸುಳುಗೋಡು, ಹೆಂಡೆಗದ್ದೆ ಗ್ರಾಮದ ಸಂಪರ್ಕ ರಸ್ತೆಯಾಗಿದ್ದು, ಈಗ ಸಂಚಾರಕ್ಕೆ ತೊಡಕುಂಟಾಗಿದೆ.

ಬಂಡೆಕಲ್ಲು ಸಂಪೂರ್ಣ ರಸ್ತೆಯನ್ನು ಆವರಿಸಿದ್ದು, ಬೈಕ್ ಸಂಚಾರ ಕೂಡ ಸಾಧ್ಯವಿಲ್ಲದಂತಾಗಿದೆ. ಪರಿಸರದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಜನ ಸಂಚಾರಕ್ಕೆ ಪರದಾಡುವ ಪರಿಸ್ಥಿತಿಯುಂಟಾಗಿದೆ.

- Advertisement -

ಬಂಡೆಯನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ನಗರ ಸೊಸೈಟಿ ಉಪಾಧ್ಯಕ್ಷ ಕುಮಾರ್ ಆಗ್ರಹಿಸಿದ್ದಾರೆ.

Join Whatsapp