ಚಿಕ್ಕಮಗಳೂರು:ನೂತನ ಜಿಲ್ಲಾ ಪೊಲೀಷ್‌ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್‌ ಅಧಿಕಾರ ಸ್ವೀಕಾರ

Prasthutha|

ಚಿಕ್ಕಮಗಳೂರು:  ಮೊದಲ ಮಹಿಳಾ ಜಿಲ್ಲಾ ಪೊಲೀಷ್‌ ವರಿಷ್ಠಾಧಿಕಾರಿಯಾಗಿ  ಉಮಾ ಪ್ರಶಾಂತ್‌ ಅಧಿಕಾರ ವಹಿಸಿಕೊಂಡಿದ್ದಾರೆ.

- Advertisement -

ಎಸ್ಪಿ ಅಕ್ಷಯ್‌ ಅವರು ಬ್ಯಾಟನ್ ಹಸ್ತಾಂತರಿಸುವ ಮೂಲಕ ಅಧಿಕಾರದಿಂದ ನಿರ್ಗಮಿಸಿದರು. ಉಮಾ ಅವರು ಜಿಲ್ಲೆಯ 52ನೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನೂತನ  ಎಸ್ಪಿ ಉಮಾ ಅವರು, ಈ ಹಿಂದೆ ಕುಣಿಗಲ್‌, ಕಾರವಾರ, ಮಂಗಳೂರು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ. ಈ ಜಿಲ್ಲೆ ನಿಸರ್ಗ ಸೊಬಗು, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ ದು ಹೇಳಿದರು.

- Advertisement -

ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತೇವೆ. ಜನರ ಸಮಸ್ಯೆ– ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ’ ಎಂದು ಭರವಸೆ ನೀಡಿದರು.

Join Whatsapp