ಸೌಜನ್ಯ ಹೋರಾಟದ ದಿಕ್ಕುತಪ್ಪಿಸುತ್ತಿರುವ ಮುತಾಲಿಕ್ ವಿರುದ್ಧ ಕ್ರಮ ಯಾಕಿಲ್ಲ: SDPI ಆಕ್ರೋಶ

Prasthutha|

ಮಂಗಳೂರು: ಕಳೆದ ಭಾನುವಾರ ಬೆಳ್ತಂಗಡಿಯಲ್ಲಿ ಸೌಜನ್ಯ ಪರ ಹೋರಾಟದಲ್ಲಿ ಪ್ರಮೋದ್ ಮುತಾಲಿಕ್ ತನ್ನ  ಭಾಷಣದಲ್ಲಿ ಅಬ್ದುಲ್ ನಾಸಿರ್ ಮಅದನಿಗೆ ಜಾಮೀನು ನೀಡಿದ ನ್ಯಾಯಾಧೀಶರರ ಬಗ್ಗೆ ಅವಹೇಳನಕಾರಿಯಾಗಿ ನ್ಯಾಯಾಂಗ ನಿಂಧನೆಮಾಡಿ ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು ಇವರ ಕೋಮು ಪ್ರಚೋದನಕಾರಿ ಭಾಷಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ ಹಾಗು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ‌.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ರವರು ಸೌಜನ್ಯ ಪರ ಹೋರಾಟವು ರಾಜ್ಯಾದ್ಯಂತ ಬಿರುಸುಗೊಂಡು ಮರು ತನಿಖೆ ಆಗ್ರಹಿಸಬೇಕೆಂಬ ಕೂಗು ಜಾತಿ ಮತ ಬೇದವಿಲ್ಲದೆ ಎಲ್ಲೆಡೆಯಿಂದ ಮೊಳಗುತ್ತಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ ಹಾಗೂ ಸೌಜನ್ಯ ಪರ ಹೋರಾಟಕ್ಕೆ ಎಸ್‌ಡಿಪಿಐ ಪಕ್ಷ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ ಹೋರಾಟಗಾರರು ಅಯೊಜಿಸಿದ ಸಮಾವೇಶದಲ್ಲಿ  ಕೋಮು ಕೃಮಿ ಪ್ರಮೋದ್ ಮುತಾಲಿಕ್ ನನ್ನು ಕರೆತರುವುದರ ಮೂಲಕ  ಹೋರಾಟವನ್ನು ದಿಕ್ಕುತಪ್ಪುವ ಮುನ್ಸೂಚನೆಯ ಆತಂಕ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಪ್ರತಿಭಟನೆಯ ಆಯೋಜಕರು ಕೂಡ ಭಾಷಣಕಾರರನ್ನು ಆಯ್ಕೆ ಮಾಡುವಾಗ ಇಂತಹ ಪ್ರಚೋದನಕಾರಿ ಬಾಷಣಕಾರನನ್ನು  ದೂರ ಇಡಬೇಕು. ಇಲ್ಲದಿದ್ದಲ್ಲಿ ಕಷ್ಟ ಪಟ್ಟು ಆಯೋಜಿಸಿದ ಹೋರಾಟದ ದಿಕ್ಕು ತಪ್ಪುವ ಸಂಭವವೇ ಅಧಿಕವಾಗಿರುತ್ತದೆ.

- Advertisement -

ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮುತಾಲಿಕನಿಗೆ ದ‌.ಕ ಜಿಲ್ಲೆಗೆ ಅಷ್ಟು ಸಲೀಸಾಗಿ ಬಂದು ಭಾಷಣ ಮಾಡಲು ಆಗುತ್ತಿರಲಿಲ್ಲ. ದ.ಕ ಜಿಲ್ಲಾಡಳಿತವೂ ಜಿಲ್ಲೆಯ ಪ್ರವೇಶಕ್ಕೆ ನಿರ್ಭಂದ ಹೇರುವಂತ ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಪ್ರಸ್ತುತ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದರು ದ್ವೇಷ ಭಾಷಣಗಾರ ಮುತಾಲಿಕ್ ಯಾವುದೇ ಕಾನೂನಿನ ಭಯ ಇಲ್ಲದೆ ರಾಜರೋಷವಾಗಿ ತಿರುಗಾಡುತ್ತಾ ಕೋಮು ಪ್ರಚೋದನಕಾರಿ ಭಾಷಣ ಮಾಡಿದರು ಯಾವ ಕಾನೂನು ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ಮತ್ತು ಸರ್ಕಾರ ಮೌನ ಸಮ್ಮತಿ ವಹಿಸಿರುವುದು ವಿಪರ್ಯಾಸವಾಗಿದೆ.

ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನ ಪಡುತ್ತಾ ನಾಸಿರ್ ಮಅದನಿಗೆ ಜಾಮೀನು ನೀಡಿದ ನ್ಯಾಯಾದೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ನ್ಯಾಯಾಂಗ ನಿಂದನೆ ಮಾಡಿದ ಪ್ರಮೋದ್ ಮುತಾಲಿಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ

Join Whatsapp