ಜೈಲುವಾಸ ಅನುಭವಿಸುತ್ತಿರುವ ಯುವಕರಿಗೆ ನ್ಯಾಯ ಒದಗಿಸುವ ಬಗ್ಗೆ ಮುಸ್ಲಿಂ ಮುಖಂಡರು, ಜಾತ್ಯಾತೀತ ಮುಖಂಡರು ಗಂಭೀರ ಚಿಂತನೆ ನಡೆಸಬೇಕು: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಯುವಕರಿಗೆ ನ್ಯಾಯ ಒದಗಿಸುವ ಬಗ್ಗೆ ಮುಸ್ಲಿಂ ಮುಖಂಡರು, ಮತ್ತು ಜಾತ್ಯಾತೀತ ಮುಖಂಡರು ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಕರ್ನಾಟಕದ ಬಿಜೆಪಿ ಸರ್ಕಾರ, ಮುಸ್ಲಿಂ ಯುವಕರನ್ನು ಗುರಿಯಾಗಿರಿಸಿಕೊಂಡು, ಹುಬ್ಬಳ್ಳಿ ಗಲಭೆಯ ಹೆಸರಿನಲ್ಲಿ 158, ಡಿಜೆಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ 37, ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ 17, ಇನ್ನಿತರ ಸುಳ್ಳು ಪ್ರಕರಣಗಳೂ ಸೇರಿ 300 ರಷ್ಟು ಯುವಕರನ್ನು UAPA ಪ್ರಕರಣ ದಾಖಲಿಸಿ ಹಲವಾರು ವರ್ಷಗಳಿಂದ ಜೈಲಿನಲ್ಲಿ ಇಟ್ಟಿದೆ. ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ, ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಯುವಕರಿಗೆ ನ್ಯಾಯ ಒದಗಿಸುವ ಬಗ್ಗೆ ಮುಸ್ಲಿಂ ಮುಖಂಡರು, ಮತ್ತು ಜಾತ್ಯಾತೀತ ಮುಖಂಡರು ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಬಂದು 100 ದಿನ ಕಳೆದರೂ, ಈ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ ಎಂಬುದನ್ನು ಮುಸ್ಲಿಂ ಮುಖಂಡರು ಅರ್ಥ ಮಾಡಿಕೊಳ್ಳಬೇಕು. 300 ಕ್ಕಿಂತಲೂ ಹೆಚ್ಚು ಯುವಕರು ಕರಾಳ ಕಾನೂನಿನಡಿ ಜೈಲಿನಲ್ಲಿ ಇರಬೇಕಾದರೆ, ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾದ ನಾಯಕರುಗಳು, ಬಿಜೆಪಿ ಸರ್ಕಾರ ಮಾಡಿದ ಸ್ಕಾಲರ್ಶಿಪ್ ಅನ್ಯಾಯದ ಬಗ್ಗೆ ಮಾತ್ರ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp