ಮಂಗಳೂರಿನಲ್ಲಿ ತ್ರಿಶೂಲ ವಿತರಣೆಯಾದಾಗ ಪೂಂಜ ಯಾಕೆ ಮಾತಾಡಿಲ್ಲ: ಶಾಹುಲ್ ಹಮೀದ್

Prasthutha|

‘ಯು.ಟಿ ಖಾದರ್ ವಿರುದ್ಧ ಮಾತನಾಡಲು ಹರೀಶ್ ಪೂಂಜಗೆ ಯಾವ ನೈತಿಕತೆ ಇದೆ’

- Advertisement -


ಮಂಗಳೂರು: ಶಾಸಕ ಹರೀಶ್ ಪೂಂಜ ಮಸೀದಿಗೆ ಬಂದು ತಪಾಸಣೆ ಮಾಡಿ ಶಸ್ತ್ರಾಸ್ತ್ರ ಇರುವುದನ್ನು ಸಾಬೀತಪಡಿಸಬೇಕು, ಇಲ್ಲಾಂದ್ರೆ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಮಂಗಳೂರಲ್ಲಿ ತ್ರಿಶೂಲ ವಿತರಣೆಯಾದಾಗ ಪೂಂಜ ಯಾಕೆ ಮಾತಾಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಪ್ರಶ್ನಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಲ್ಲಿ ಪೂಂಜ ಒಂದೇ ಒಂದು ಉತ್ತಮ ಮಾತುಗಳನ್ನು ಆಡಿಲ್ಲ. ಪ್ರಚೋದನೆ ಮಾತು, ಕೋಮುದ್ವೇಷದ ಮಾತು, ಪ್ರಚೋದನೆಯ ಮಾತುಗಳಷ್ಟೇ ಪೂಂಜ ಬಾಯಲ್ಲಿ ಬರುತ್ತೆ. ಹರೀಶ್ ಪೂಂಜ ಅನಾಹುತಕಾರಿ ಮಾತುಗಳನ್ನಾಡಿದ್ದಾರೆ. ಯು.ಟಿ ಖಾದರ್ ವಿರುದ್ಧ ಮಾತನಾಡಲು ಶಾಸಕ ಹರೀಶ್ ಪೂಂಜ ಅವರಿಗೆ ಯಾವ ನೈತಿಕತೆ ಇದೆ ಖಾದರ್ ಅವರು ಸದನ ವೀರ, ಪೂಂಜ ಕದನ ವೀರ ಎಂದು ಹೇಳಿದ್ದಾರೆ.

- Advertisement -


ಬಿಜೆಪಿ ಸರ್ಕಾರ ಇರುವಾಗ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇದೆಯಾ ಎಂದು ಯಾಕೆ ತಪಾಸಣೆ ಮಾಡಿಲ್ಲ. ಹರೀಶ್ ಪೂಂಜ ಅವರು ಮಸೀದಿಗೆ ಬಂದು ತಪಾಸಣೆ ಮಾಡಿ ಶಸ್ತ್ರಾಸ್ತ್ರ ಇರುವುದನ್ನು ಸಾಬೀತಪಡಿಸಬೇಕು, ಇಲ್ಲಾಂದ್ರೆ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಮಂಗಳೂರಲ್ಲಿ ತ್ರಿಶೂಲ ವಿತರಣೆಯಾದಾಗ ಪೂಂಜ ಯಾಕೆ ಮಾತಾಡಿಲ್ಲ. ಹರೀಶ್ ಪೂಂಜ ಪ್ರಚೋದನೆ ಮಾಡುವುದನ್ನು ಬಿಡಬೇಕು. ಶಾಸಕರಾಗಿ ಜವಾಬ್ದಾರಿಯಿಂದ ವರ್ತಿಸಿ. ಪದೇ ಪದೇ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಚೋದನೆ ಮಾಡುವ ಕೆಲಸ ಮಾಡಬಾರದು: ಪದ್ಮರಾಜ್ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿಯಿಂದ ನಮ್ಮ ಜಿಲ್ಲೆಗೆ ತೊಂದರೆ ಆಗಿದೆ.  ಚುನಾವಣೆ ನಂತರ ಅಭಿವೃದ್ಧಿಯ ವಿಚಾರದಲ್ಲಿ ಮಾತಾಡಬೇಕು, ಪ್ರಚೋದನೆ ಮಾಡುವ ಕೆಲಸ ಮಾಡಬಾರದು ಎಂದು ಪದ್ಮರಾಜ್ ಪೂಜಾರಿ ಹೇಳಿದ್ದಾರೆ.

ಬ್ರಿಜೇಶ್ ಚೌಟ ಜಿಲ್ಲೆಯ ಎಲ್ಲಾ ಜನರ ಸಂಸದ, ಬಿಜೆಪಿಯವರ ಸಂಸದ ಅಲ್ಲ, ಬಿಜೆಪಿ ಶಾಸಕರು ಎಲ್ಲಾ ಜನರ ಶಾಸಕರೇ ಹೊರತು ಒಂದು ಪಕ್ಷಕ್ಕೆ ಶಾಸಕರಲ್ಲ. ವಿರೋಧ ಪಕ್ಷದಲ್ಲಿರುವವರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ವಾ?. ಪ್ರಮಾಣ ವಚನಕ್ಕೆ ವಿರುದ್ದವಾಗಿ ಜನರನ್ನು ಪ್ರಚೋದನೆ ಮಾಡುವುದು ಸರಿಯಲ್ಲ ಬೋಳಿಯಾರ್ ಘಟನೆಯಲ್ಲಿ ಬಡಕುಟುಂಬಕ್ಕೆ ಸೇರಿದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪೆಟ್ಟು ತಿಂದವರು ಜೈಲಿಗೆ ಹೋದವರು ಬಡವರು. ಪ್ರಚೋದನೆ ಮಾಡುವವರ ಬಗ್ಗೆ ಯುವ ಸಮೂಹ ಯೋಚನೆ ಮಾಡಬೇಕು ಎಂದರು.

Join Whatsapp