ನಾವು ಮಾತ್ರ ಯಾಕೆ ಟಾರ್ಗೆಟ್? ಬಿಜೆಪಿಯವರು ಬಡವರಾ?: ACB ವಿಚಾರಣೆ ಬಳಿಕ ಶಾಸಕ ಝಮೀರ್ ಅಹ್ಮದ್ ಕಿಡಿ

Prasthutha|

ಬೆಂಗಳೂರು: ಎಸಿಬಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ, ಎಸಿಬಿ, ಐಟಿ ಎಲ್ಲಾ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಕಣ್ಣಿಗೆ ನಾವು ಮಾತ್ರ ಕಣ್ತಿರೋದಾ? ದೇಶದಲ್ಲಿ ಬಿಜೆಪಿಯವರು ಯಾರೂ ಶ್ರೀಮಂತರೇ ಇಲ್ವಾ, ಅವರು ಮನೆ ಕಟ್ಟಿಲ್ವಾ? ನನ್ನ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರಣೆಗೆ ಸ್ಪಂದಿಸಿದೀನಿ. ಅಗತ್ಯವಿದ್ದು ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

Join Whatsapp