NRC ಜಾರಿ, ಜನಸಂಖ್ಯಾ ಆಯೋಗ ರಚನೆಗೆ ಮುಂದಾದ ಮಣಿಪುರ ಸರ್ಕಾರ

Prasthutha|

ಇಂಫಾಲ: NRC ಜಾರಿ ಮತ್ತು ಜನಸಂಖ್ಯಾ ಆಯೋಗ ರಚನೆ ಮಾಡುವ ನಿಟ್ಟಿನಲ್ಲಿ ಮಣಿಪುರ ಅಸೆಂಬ್ಲಿಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

ಬಜೆಟ್ ಅಧಿವೇಶನದ ಕೊನೆಯ ದಿನ ಜೆಡಿಯು ಸದಸ್ಯ ಜಾಯ್’ಕಿಶನ್ ಅವರು ಇದಕ್ಕೆ ಸಂಬಂಧಿಸಿದಂತೆ ಖಾಸಗಿ ನಿರ್ಣಯವನ್ನು ಮಂಡಿಸಿದ್ದರು.
ಮಣಿಪುರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ 1971 – 2001 ರ ಅವಧಿಯಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಶೇ. 153.3 ರಷ್ಟು ಏರಿಕೆಯಾಗಿದೆ. ಅಲ್ಲದೆ 2001 – 2011 ರ ಅವಧಿಯಲ್ಲಿ ಅದು ಶೇ. 250.9 ರಷ್ಟು ಏರಿಕೆಯಾಗಿದೆ ಎಂದು ಅವರು ವಾದಿಸಿದರು.

Join Whatsapp