ಮದ್ಯಪಾನಕ್ಕೆ ಇಲ್ಲದ ಜೈಲು, ಡ್ರಗ್ಸ್ ಗೆ ಯಾಕೆ ?: ಕೇಂದ್ರ ಸಚಿವ

Prasthutha|

ನವದೆಹಲಿ: ಡ್ರಗ್ಸ್ ಸೇವಿಸುವವರನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಾತನಾಡಿದ ಅವರು, ಮದ್ಯ ಸೇವಿಸುವವರೇ ಜೈಲಿಗೆ ಹೋಗುವುದಿಲ್ಲ. ಆದರೆ ಮಾದಕ ವ್ಯಸನಿಗಳನ್ನು ಜೈಲಿಗೆ ಕಳುಹಿಸಲು ಕಾನೂನುಗಳಿವೆ. ನಾವು ಮಾದಕ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲು ಬಯಸುತ್ತೇವೆ, ಜೈಲುಗಳಿಗೆ ಅಲ್ಲ. ಇದಕ್ಕಾಗಿ ಕಾನೂನುಗಳನ್ನು ಬದಲಾಯಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.


ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಉದ್ದೇಶಿಸಿ ಸಚಿವರು ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ.



Join Whatsapp