ಬಿಡುಗಡೆಗೊಂಡ ಅನುದಾನ ಬಳಕೆಯಾಗಿಲ್ಲ| ಇದನ್ನು ‘ಡಕೋಟಾ ಸರ್ಕಾರ’ ಎನ್ನದೆ ಇನ್ನೇನು ಹೇಳಬೇಕು? : ಕಾಂಗ್ರೆಸ್

Prasthutha|

ಬೆಂಗಳೂರು: ಹಲವು ಇಲಾಖೆಗಳಲ್ಲಿ ಬಿಡುಗಡೆಗೊಂಡ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು ‘ಡಕೋಟಾ ಸರ್ಕಾರ’ ಎನ್ನದೆ ಇನ್ನೇನು ಹೇಳಬೇಕು? ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

- Advertisement -

ವಸತಿ, ಆರೋಗ್ಯ ಸೇರಿದಂತೆ ರಾಜ್ಯ ಸರ್ಕಾರದ ಐದು ಇಲಾಖೆಗಳು ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಏಳು ಯೋಜನೆಗಳಿಗೆ ಮೀಸಲಿಟ್ಟಿರುವ ಅನುದಾನದ ಬಳಕೆಯಲ್ಲಿ ಹಿಂದುಳಿದಿದ್ದು, ಸೆಪ್ಟೆಂಬರ್‌ ಅಂತ್ಯದ ವೇಳೆಗೆ ನಿಗದಿಪಡಿಸಿದ್ದ ಗುರಿಗೆ ಹೋಲಿಸಿದರೆ ಒಟ್ಟು ₹ 21,331.65 ಕೋಟಿ ಬಳಕೆಯಾಗದೆ ಉಳಿದಿದೆ.ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ಇದನ್ನು ಬಹಿರಂಗಪಡಿಸಿವೆ. ಕೃಷಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗಳೂ ಈ ಪಟ್ಟಿಯಲ್ಲಿವೆ.

- Advertisement -

ಇದನ್ನೇ ಉಲ್ಲೇಖಿಸಿ ಕಾಂಗ್ರೆಸ್‌ ರಾಜ್ಯ ಘಟಕ ಟ್ವೀಟ್‌ ಮಾಡಿ, ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ‘ಶೂನ್ಯ ಸಂಪಾದನೆ’ ಮಾಡಿದೆ. ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ₹21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು ‘ಡಕೋಟಾ ಸರ್ಕಾರ’ ಎನ್ನದೆ ಇನ್ನೇನು ಹೇಳಬೇಕು?’ ಎಂದು ಪ್ರಶ್ನಿಸಿದೆ.

Join Whatsapp