ಹೊಸದಿಲ್ಲಿ: ಸಂಸತ್ ಅಧಿವೇಶನದಕ್ಕೆ ಬಿಜೆಪಿ ಸಂಸದರೊಬ್ಬರು ಮದ್ಯದ ಬಾಟಲಿ ಹಿಡಿದು ಬಂದ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪಶ್ಚಿಮ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ಸಂಸತ್ತಿಗೆ ಮದ್ಯದ ಬಾಟಲಿ ತಂದಿದ್ದು, ದೆಹಲಿ ಸರ್ಕಾರದ ಮದ್ಯ ನೀತಿಯನ್ನು ವಿರೋಧಿಸಿ ಅವರು ಮದ್ಯದ ಬಾಟಲಿ ಹಿಡಿದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್ ಸಮಯದಲ್ಲಿ 25,000 ಜನರು ಸತ್ತಾಗ ದೆಹಲಿ ಸರ್ಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ಮದ್ಯ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಅ ನೀತಿಯನ್ನು ರೂಪಿಸುವಲ್ಲಿ ನಿರತವಾಗಿತ್ತು. ಇತ್ತೀಚೆಗೆ 824 ಹೊಸ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಜನನಿಬಿಡ ಪ್ರದೇಶಗಳು, ಕಾಲೋನಿಗಳು ಮತ್ತು ಹಳ್ಳಿಗಳಲ್ಲಿ ಬಾರ್ ಗಳನ್ನು ತೆರೆಯುತ್ತಿದ್ದಾರೆ. ಮದ್ಯಪಾನದ ವಯೋಮಿತಿಯನ್ನು 25 ರಿಂದ 21 ಕ್ಕೆ ಇಳಿಸಲಾಗಿದೆ ಎಂದು ಪ್ರವೇಶ್ ಆರೋಪಿಸಿದ್ದಾರೆ.
ಇನ್ನು ಸಂಸತ್ತಿಗೆ ಮದ್ಯದ ಬಾಟಲಿ ತಂದ ಸಂಸದನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದು ‘ಬಿಜೆಪಿ ಸಂಸ್ಕೃತಿ’ ಎಂದು ಹಲವರು ಕಿಡಿಕಾರಿದ್ದಾರೆ.