ಅಕ್ರಮ ಹಣ ವರ್ಗಾವಣೆ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಗೆ ಇಡಿ ಸಮನ್ಸ್

Prasthutha|

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಗೆ ಜಾರಿ ನಿರ್ದೇಶನಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ.

- Advertisement -

ಅಲ್ಲದೆ, ಡಿಸೆಂಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಅವರ ಹೆಸರು ಕೇಳಿಬಂದಿದ್ದು, ಈ ಪ್ರಕರಣದ ಪ್ರಮುಖ ರೂವಾರಿ ಸುಕೇಶ್‌ ಚಂದ್ರಶೇಖರ್‌ ಜೊತೆಗೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಮ್ಮೆ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್‌ ಗೆ ನೋಟಿಸ್‌ ಕೂಡ ನೀಡಿತ್ತು. ಅಲ್ಲದೆ ನಿನ್ನೆ ಭಾರತ ಬಿಟ್ಟು ಹೊಗದಂತೆ ಬಾಲಿವುಡ್ ನಟಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದ ಇಡಿ, ಇಂದು ಸಮನ್ಸ್ ಜಾರಿ ಮಾಡಿದೆ.

Join Whatsapp