ರಾಂಚಿ, ಜು.26: ಜಾರ್ಖಂಡ್ ಕಾಂಗ್ರೆಸ್ ಶಾಸಕರೊಬ್ಬರಿಗೆ ಒಂದು ಕೋಟಿಯ ಆಮಿಷ ಒಡ್ಡಿ ಅಲ್ಲಿನ ಜೆಎಂಎ- ಕಾಂಗ್ರೆಸ್- ಆರ್ ಜೆಡಿ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಕೋಲೆಬಿರ ಕ್ಷೇತ್ರದ ಶಾಸಕ ನಮನ್ ಬಿಕ್ಸಲ್ ಕೊಂಗರಿ ಅವರು ಪತ್ರಿಕೆಗಳಿಗೆ ತಿಳಿಸಿದಂತೆ ಮೂವರು ಒಂದು ಕೋಟಿ ರೂಪಾಯಿ ಮತ್ತು ಲಾಭದ ಆಮಿಷಗಳೊಡನೆ ಹತ್ತಾರು ಬಾರಿ ತಮ್ಮನ್ನು ಸಂಪರ್ಕಿಸಿದ್ದಾರೆ. “ನಮ್ಮ ಪಕ್ಷದ ಕಾರ್ಯಕರ್ತರು ಹೇಳುವಂತೆ ಬಂದಿದ್ದ ಮೂವರು ಒಂದು ಕಂಪೆನಿಗೆ ಸೇರಿದವರು. ಯಾವಾಗ ಅವರು ಒಂದು ಕೋಟಿ ನಗದು ಎದುರಿಟ್ಟಾಗ ನಾನು ಆ ಸಂಗತಿಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆಲಂಗೀರ್ ಆಲಂ, ಕಾಂಗ್ರೆಸ್ ನ ಜಾರ್ಖಂಡ್ ಉಸ್ತುವಾರಿ ಆರ್. ಪಿ. ಎನ್. ಸಿಂಗ್ ಅಲ್ಲದೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮಾಹಿತಿ ನೀಡಿದ್ದೇನೆ” ಎಂದು ಶಾಸಕ ನಮನ್ ಬಿಕ್ಸಲ್ ಹೇಳಿದರು.
ಈ ಬಗೆಗೆ ಆರ್. ಪಿ. ಎನ್. ಸಿಂಗ್ ಅವರು ಇದನ್ನು ಪತ್ರಿಕೆಗಳ ಜೊತೆಗೆ ಈಗ ರಚಿಸುವುದಿಲ್ಲ ಎಂದರು. ಮುಖ್ಯಮಂತ್ರಿ ಹೇಮಂತ್ ಅವರು ಗಮನಿಸಿದ್ದೇನೆ. ಆತಂಕಕ್ಕೆ ಕಾರಣವಿಲ್ಲ ಎಂದಷ್ಟೆ ತಿಳಿಸಿದ್ದಾರೆ.
ಅಭಿಷೇಕ್ ದುಬೆ, ಅಮಿತ್ ಸಿಂಗ್, ನಿವಾರಣ್ ಪ್ರಸಾದ್ ಈ ಮೂವರನ್ನು ಈ ಸಂಬಂಧವಾಗಿ ರಾಂಚಿಯ ಕೋತ್ವಾಲಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಮೂವರೂ ಬಿಜೆಪಿ ನಾಯಕರ ಸಂಪರ್ಕದಲ್ಲಿ ಇರುವುದು ತನಿಖೆಯಿಂದ ತಿಳಿದು ಬಂದಿದೆ.