ಈ ಬಾರಿ ವಿಧಾನಸಭೆಗೆ ಆಯ್ಕೆಯಾದ ತಂದೆ-ಮಕ್ಕಳ ಜೋಡಿ ಯಾರೆಲ್ಲಾ? ಇಲ್ಲಿದೆ ಮಾಹಿತಿ

Prasthutha|

ಬೆಂಗಳೂರು: ಈ ಬಾರಿ ವಿಧಾನಸಭೆಯಲ್ಲಿ 5 ತಂದೆ- ಮಕ್ಕಳ ಜೋಡಿ ಕಾಣಿಸಿಕೊಳ್ಳಲಿದೆ.

- Advertisement -


ಜೆಡಿಎಸ್ ಪಕ್ಷದ ಜಿಟಿ ದೇವೇಗೌಡ ಮತ್ತು ಅವರ ಮಗ ಜಿಡಿ ಹರೀಶ್ ಗೌಡ ಕ್ರಮವಾಗಿ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರಗಳಿಂದ ವಿಧಾನಸಭೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ ಬಿಟಿಎಮ್ ಲೇಔಟ್ ಮತ್ತು ಅವರ ಮಗಳು ಸೌಮ್ಯರೆಡ್ಡಿ ಅವರು ಜಯನಗರ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.


ಕಾಂಗ್ರೆಸ್ ಪಕ್ಷದ ಕೆ ಹೆಚ್ ಮನಿಯಪ್ಪ ಮತ್ತು ಅವರ ಮಗಳು ರೂಪಕಲಾ ಶಶಿಧರ್ ಕ್ರಮವಾಗಿ ದೇವನಹಳ್ಳಿ ಹಾಗೂ ಕೆಜಿಎಫ್ ಕ್ಷೇತ್ರಗಳಿಂದ ಗೆದ್ದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಎಂ ಕೃಷ್ಣಪ್ಪ ಮತ್ತು ಅವರ ಮಗ ಪ್ರಿಯಾಕೃಷ್ಣ ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರಗಳಿಂದ ಗೆದ್ದಿದ್ದಾರೆ.

- Advertisement -


ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ ಮಂಜು ಮತ್ತು ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಮಗ ಮಂಥನ್ ಗೌಡ ಗೆದ್ದಿದ್ದಾರೆ.

Join Whatsapp