ಅ. 24 ರಿಂದ ಈ ಮೊಬೈಲ್’ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ….

Prasthutha|

ನವದೆಹಲಿ: ಅಕ್ಟೋಬರ್ 24 ರಿಂದ iOS 10 ಅಥವಾ iOS 11 ಆವೃತ್ತಿಯ ಮೇಲೆ ನಡೆಯುತ್ತಿರುವ ಐಫೋನ್ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

- Advertisement -


ವಾಟ್ಸ್ ಆ್ಯಪ್ ಬೇಕಾದರೆ ಹಳೆಯ ಐಫೋನ್ ಹೊಂದಿರುವವರು ತಮ್ಮ ಮೊಬೈಲ್ ಗಳನ್ನು iOS 12 ಅಥವಾ ಅದಕ್ಕೂ ಹೆಚ್ಚಿನ ಆವೃತ್ತಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ iOS 10 ಅಥವಾ iOS 11 ಮಾಡೆಲ್ ಗಳನ್ನು ಬಳಸುತ್ತಿರುವವರು ಈಗ ಅನಿವಾರ್ಯವಾಗಿ ಹೊಸ ಫೋನ್ ಖರೀದಿಸಬೇಕಾಗುತ್ತದೆ. ಈ ಹಳೆಯ ಮಾಡೆಲ್ ಗಳನ್ನು ಹೊಸ iOS ಸಾಫ್ಟವೇರ್ ಗೆ ಅಪ್ಡೇಟ್ ಮಾಡುವುದು ವಾಸ್ತವಿಕವಾಗಿ ಕಷ್ಟಕರವಾಗಿದೆ.


iPhone 5s ಅಥವಾ ನಂತರದ ಮಾದರಿಗಳನ್ನು ಹೊಂದಿರುವ ಬಳಕೆದಾರರು iOS 12 ಗೆ ನವೀಕರಿಸಿ ವಾಟ್ಸ್ಆ್ಯಪ್ ಬಳಕೆಯನ್ನು ಮುಂದುವರಿಸಬಹುದಾಗಿದೆ.

Join Whatsapp