ನವದೆಹಲಿ : ಇದೀಗ ನಿಮ್ಮ ಅಚ್ಚುಮೆಚ್ಚಿನ ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರು, ಮಿತ್ರರು, ವ್ಯವಹಾರಸ್ಥರಿಗೆ ಹಣ ಕೂಡ ಕಳುಹಿಸಬಹುದು. ಹೌದು, ‘ವಾಟ್ಸಪ್ ಪೇ’ ಈಗ ಭಾರತದಲ್ಲಿ ಚಾಲ್ತಿಗೆ ಬಂದಿದೆ.
ಭಾರತದಲ್ಲಿ ಇಂದಿನಿಂದ ಈ ಫೀಚರ್ ಲಭ್ಯವಿರಲಿದೆ ಎಂದು ವಾಟ್ಸಪ್ ಕಂಪೆನಿ ಪ್ರಕಟಿಸಿದೆ. ವಾಟ್ಸಪ್ ನಲ್ಲಿ ನೀವು ಸಂದೇಶ ಕಳುಹಿಸಿದಷ್ಟೇ ಸರಳ, ಸುಲಲಿತ ಮತ್ತು ಸುಲಭವಾಗಿಸುವ ಉದ್ದೇಶ ತಮ್ಮದಾಗಿದೆ ಎಂದು ಕಂಪೆನಿ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ.
ಭಾರತದಲ್ಲಿ ಈಗಾಗಲೇ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮತ್ತಿತರ ಹಲವು ಆನ್ ಲೈನ್ ಪೇಮೆಂಟ್ ಆಪ್ ಗಳಿವೆ. ವಾಟ್ಸಪ್ ಎನ್ ಪಿಸಿಐ ಮತ್ತು ಯುಪಿಐ ಜೊತೆ ಸಹಭಾಗಿತ್ವ ಹೊಂದಿದೆ. 160ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ ಹಣ ವರ್ಗಾವಣೆ ಈಗ ವಾಟ್ಸಪ್ ಮೂಲ ಸಾಧ್ಯವಾಗಲಿದೆ.
ನಿಮ್ಮ ವಾಟ್ಸಪ್ ಪ್ರೊಫೈಲ್ ಗೆ ಹೋಗಿ ನೀವು ಯಾರಿಗೆ ಹಣ ವರ್ಗಾವಣೆ ಮಾಡಬೇಕೆಂದಿದ್ದೀರೋ, ಅವರ ನಂಬರ್ ಗೆ ಸಂದೇಶ ಕಳುಹಿಸುವ ಆಯ್ಕೆಯನ್ನು ಆಯ್ದುಕೊಂಡಾಗ, ಅಲ್ಲಿ ಫೈಲ್ ಅಟ್ಯಾಚ್ ಮೆಂಟ್ ಆಪ್ಶನ್ ಆಯ್ಕೆ ಮಾಡಬೇಕು, ಅಲ್ಲಿ ಪೇಮೆಂಟ್ ಆಪ್ಶನ್ ಲಭ್ಯವಿದ್ದು, ಆ ಮೂಲಕ ಹಣ ಪಾವತಿಸಬಹುದಾಗಿದೆ.