ವಾಟ್ಸಾಪ್ ಪೇ: ಅತಿ ದೊಡ್ಡ ವೈಫಲ್ಯ ಎಂದು ಟ್ರೋಲ್ ಮಾಡಿದ ಭಾರತ್ ಪೇ ಸಹ-ಸಂಸ್ಥಾಪಕ

Prasthutha|

ನವದೆಹಲಿ: ವಾಟ್ಸಾಪ್ ಪೇ ಭಾರತದ ಅತಿದೊಡ್ಡ ವೈಫಲ್ಯವಾಗಿದೆ ಎಂದು ಭಾರತ್ ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಟೀಕೆ ಮಾಡಿದ್ದಾರೆ

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ವಾಟ್ಸಾಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ. ಎಲ್ಲರ ಮೊಬೈಲ್ ನಲ್ಲಿ  ವಾಟ್ಸಾಪ್ ಇದೆ. ವಾಟ್ಸಾಪ್ ನಲ್ಲಿ ಫೋಟೋ ಕಳಿಸಿದಷ್ಟೇ ಸುಲಭವಾಗಿ ಹಣ ಕಳಿಸುವಂತಿದ್ದರೆ  ಅದು ಪೇಟಿಎಂ, ಫೋನ್ ಪೇ, ಗೂಗಲ್ ಪೇ ಅನ್ನು ಹಿಂದಿಕ್ಕಬೇಕಿತ್ತು. ವಾಟ್ಸಾಪ್ ಭಾರತೀಯ ಮುಖ್ಯಸ್ಥರು ಮಾರುಕಟ್ಟೆಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ವಾಟ್ಸಾಪ್  ತನ್ನ ಭದ್ರತಾ ಫೀಚರ್ ಬಗ್ಗೆ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿಗೆ ಪ್ರತಿಕ್ರಿಯಿಸಿರುವ ಅವರು, ಭದ್ರಾತಾ ಫೀಚರ್ ಗಳ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗೆ ಬಂಡವಾಳ ಹೂಡಿಕೆ ಮಾಡುವ ಬದಲು, ಪೇಮೆಂಟ್ ಸೇವೆ ಇನ್ನಷ್ಟು ಬಲಪಡಿಸುವ ಬಗ್ಗೆ ಗಮನ ಕೊಡಲಿ ಎಂದಿದ್ದಾರೆ.



Join Whatsapp