ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ರಾಜೀನಾಮೆ; ಖರ್ಗೆಗೆ ಎದುರಾದ ಸಂಘಟನಾ ಸಮಸ್ಯೆ

Prasthutha|

ನವದೆಹಲಿ: ಭಾರತ್ ಜೋಡೋ ಯಾತ್ರೆಯು ರಾಜಸ್ಥಾನವನ್ನು ಪ್ರವೇಶಿಸಲು ಕೇವಲ ಹದಿನೈದು ದಿನಗಳು ಮಾತ್ರ ಉಳಿದಿವೆ.  ಈ ಸಂದರ್ಭದಲ್ಲಿ ಪಕ್ಷದ  ರಾಜಸ್ತಾನ ಉಸ್ತುವಾರಿ ಅಜಯ್ ಮಾಕೆನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಸೆಪ್ಟೆಂಬರ್ 25 ರಂದು ಜೈಪುರದಲ್ಲಿ ಸಮಾನಾಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ನಡೆಸಿದ್ದಕ್ಕಾಗಿ ನಾನು ಶೋಕಾಸ್ ನೋಟಿಸ್ ನೀಡಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೂವರು ನಿಷ್ಠಾವಂತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಸಮಾಧಾನಗೊಂಡ ಅಜಯ್ ಮಾಕೆನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್, ಪಕ್ಷದ ಮುಖ್ಯ ಸಚೇತಕ ಮಹೇಶ್ ಜೋಶಿ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಆರ್ಟಿಡಿಸಿ) ಅಧ್ಯಕ್ಷ ಧರ್ಮೇಂದ್ರ ರಾಥೋಡ್ ವಿರುದ್ಧ ಶಿಸ್ತು ಸಮಿತಿಯು ಶೋಕಾಸ್ ನೋಟಿಸ್ ನೀಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಕೆನ್ ನವೆಂಬರ್ 8 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದರು.

- Advertisement -

ಖರ್ಗೆಯವರೂ ಏನೂ ಹೇಳಿಲ್ಲವಾದ್ದರಿಂದ ನನಗೆ ಈ ಹುದ್ದೆಯಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ನೋಟೀಸು ಕೊಟ್ಟವರ ವಿರುದ್ಧ ಕ್ರಮವೂ ಇಲ್ಲ. ಕೊನೆಯ ಮಟ್ಟಿಗೆ ಅವರು ಕ್ಷಮಾಪಣೆಯನ್ನೂ ಕೇಳಿಲ್ಲ. ಹಾಗಾದರೆ ನಾನಿಲ್ಲಿ ಕುಳಿತು ಮಾಡುವುದೇನು ಎಂದು ಮಾಕೆನ್ ರಾಜೀನಾಮೆ ಪತ್ರದಲ್ಲಿ ಕೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷತೆಗೆ ಸ್ಪರ್ಧಿಸುವಾಗ ನಾಯಕತ್ವ ಬದಲಾವಣೆಗೆ ಸಿಎಲ್ ಪಿ ಸಭೆ ಕರೆಯಲಾಗಿತ್ತು. ಆದರೆ ಮುಖ್ಯಮಂತ್ರಿಯಾಗಿ ಗೆಹ್ಲೋಟ್ ರವರೇ ಮುಂದುವರಿಯಬೇಕು ಎಂದು ಆ ಮೂವರು ಬೇರೆಯೇ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಆ ಅಶಿಸ್ತನ್ನು ಖಂಡಿಸಿ ಉಸ್ತುವಾರಿ ಹೊತ್ತಿದ್ದ ಅಜಯ್ ಮಾಕೆನ್ ನೋಟೀಸು ನೀಡಿದ್ದರು.

ತಮ್ಮ ಬೆಂಬಲಿಗರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಡದಿರುವುದೇ ಕಾಂಗ್ರೆಸ್ ಬಿಕ್ಕಟ್ಟಿಗೆ ಕಾರಣವಾಗಿದೆ.



Join Whatsapp