ಒಂದು ವಾರದಲ್ಲಿ ಎರಡು ಬಾರಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್

Prasthutha|

ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರು ಮತ್ತೊಮ್ಮೆ ಪರದಾಡಿದ ಸ್ಥಿತಿ ವರದಿಯಾಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆಗಳ ಕಾಲ ಫೇಸ್‌ಬುಕ್, ಇನ್ಸ್ಟಾ, ವಾಟ್ಸ್ಆ್ಯಪ್ ಸೇವೆಯು ಸ್ಥಗಿತಗೊಂಡಿದ್ದು, ತನ್ನ ಬಳಕೆಗಾರರಲ್ಲಿ ಫೇಸ್‌ಬುಕ್ ಇನ್‌ಕಾರ್ಪೊರೇಷನ್ ಕ್ಷಮೆಯನ್ನು ಯಾಚಿಸಿದೆ.

- Advertisement -

ಎರಡು ಗಂಟೆಗಳ ಕಾಲ ಮತ್ತೆ ಫೇಸ್‌ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ನಿನ್ನೆ ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ. ಕಳೆದ ಸೋಮವಾರ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 6 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಬಳಕೆ ಅಲಭ್ಯವಾಗಿತ್ತು.



Join Whatsapp