‘ಅವರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು’: ಸಿಧು ವೀಡಿಯೋ ವೈರಲ್!

Prasthutha|

ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್ ಶಾಸಕ ಮತ್ತು ಮಾಜಿ ರಾಜ್ಯಾಧ್ಯಕ್ಷ ನವ ಜ್ಯೋತ್ ಸಿಂಗ್ ಸಿಧು ಅವರ ಹೊಸ ವಿಡಿಯೋ ಈಗ ವೈರಲಾಗಿದ್ದು, ಸಿಧು ಮುಖ್ಯಮಂತ್ರಿಯಾಗಲು ಬಯಸಿದ್ದರು ಎಂಬುದನ್ನು ಅದು ಸ್ಪಷ್ಟಪಡಿಸುತ್ತಿದೆ. ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯನ್ನು ಉಲ್ಲೇಖಿಸಿ “ಅವರು ನನ್ನನ್ನು ಮುಖ್ಯಮಂತ್ರಿ ಮಾಡಬೇಕಿತ್ತು ಎಂದು ಸಿಧು ಹೇಳುತ್ತಿರುವುದು ವಿಡಿಯೋದಲ್ಲಿ ಇದೆ.

- Advertisement -

ಸರ್ಕಾರವನ್ನು ಮುನ್ನಡೆಸಲು ಅವರು ನನಗೆ ಅವಕಾಶ ನೀಡಿದ್ದರೆ ಹೆಚ್ಚು ಯಶಸ್ವಿಯಾಗುತ್ತಿತ್ತು ಎಂದು ಸಿದ್ದು ಹೇಳುತ್ತಾರೆ.  ಸದ್ಯದ ಬಿಕ್ಕಟ್ಟು 2022 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಸಿಧು ಮುಖ್ಯಮಂತ್ರಿಯ ಕಾಲೆಳೆದಿದ್ದಾರೆ.

https://twitter.com/Newsbox_India/status/1446561073771913218?ref_src=twsrc%5Etfw%7Ctwcamp%5Etweetembed%7Ctwterm%5E1446561073771913218%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fmalayalam%2Fmalayalamexpressonline-epaper-malayala%2Fennemukhyamanthriyakkanamayirunnusidhdhuvindevidiyovairal-newsid-n322440920

ಈ ಕುರಿತು ಪ್ರತಿಕ್ರಿಯಿಸಿದ ಶಿರೋಮಣಿ ಅಕಾಲಿ ದಳ, ಎಸ್ಸಿ ಮುಖ್ಯಮಂತ್ರಿಯ ಮೇಲೆ ಸಿಧು ಅಸೂಯೆ ಪಟ್ಟಿದ್ದಾರೆ ಎಂದು ಹೇಳಿದೆ.  

- Advertisement -

ಪಂಜಾಬ್ ಕಾಂಗ್ರೆಸ್ ತಿಂಗಳುಗಳಿಂದ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಸಿಧು ಮತ್ತು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವಿನ ಸಮರವು ಅಮರಿಂದರ್ ಸಿಂಗ್ ಅವರ ರಾಜೀನಾಮೆಗೆ ಕಾರಣವಾಗಿತ್ತು.

Join Whatsapp