ಬೆಂಗಳೂರು : ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ, ಶಿಕ್ಷಣ ಸಚಿವರು ಮಾತನಾಡುವ ಭರದಲ್ಲಿ ಹಾಗೆ ಹೇಳಿದ್ದಾರೆ ಎಂದು ಪಠ್ಯ ಪರಿಷ್ಕರಣೆಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅವರು, “ನಾನು ಕೇವಲ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುತ್ತೇನೆ. ನಮ್ಮ ಕೈ ಕೆಳಗೆ ವಿಷಯ ತಜ್ಞರು ಇರುತ್ತಾರೆ. ಅವರು ನೀಡುವ ಶಿಫಾರಸ್ಸುಗಳನ್ನು ನಾನು ಪರಿಷ್ಕರಣೆ ಮಾಡಿದ್ದೇನೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಕೂಡ ಆಗಿರುವುದರಿಂದ ನನಗೆ ಆ ಅಧಿಕಾರವಿದೆ. ನಾನು ಐದು ವರ್ಷದದಲ್ಲಿ ನಿರಂತರವಾಗಿ ಪಠ್ಯಪುಸ್ತಕಗಳ ಬಗ್ಗೆ ಮಾತನಾಡುತ್ತೇನೆ. ಈ ಪ್ರಕ್ರಿಯೆ ನೋಡಿ ನನ್ನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿರಬಹುದು” ಎಂದಿದ್ದಾರೆ.
ಶಿಕ್ಷಣ ಸಚಿವರು ತನ್ನ ವಿದ್ಯಾರ್ಹತೆಯ ಬಗ್ಗೆ ಹೇಳಿದ್ದನ್ನು ಅಲ್ಲಗಳೆದ ಚಕ್ರತೀರ್ಥ, ನಾನು ಐಐಟಿ ಹಾಗೂ ಸಿಇಟಿ ಪ್ರೊಫೆಸರ್ ಎಂಬುದನ್ನು ನಿರಾಕರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.