ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ, ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಡಿಕೆಶಿ ಸ್ಪಷ್ಟನೆ

Prasthutha|

ಬೆಂಗಳೂರು: ಆಂಜನೇಯನಿಗೂ ಭಜರಂಗದಳಕ್ಕೂ ಏನು ಸಂಬಂಧ. ಬಿಜೆಪಿ ಅವರು ಬಹಳ ಪ್ರವೋಕ್ ಮಾಡುತ್ತಿದ್ದಾರೆ. ಜನಕ್ಕೆ ಇದು ಅರ್ಥ ಆಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಹನುಮಂತ ಭಕ್ತರು, ಆಂಜನೇಯ ಬೇರೆ ಬಜರಂಗದಳ ಬೇರೆ, ಬಿಜೆಪಿ ಅವರು ಬಜರಂಗಿ ಎಂದು ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ ಎಂದರು.


ಇನ್ನು ಇದೇ ವೇಳೆ ನಾಳೆ(ಮೇ.4) ಹನುಮ ಚಾಲಿಸ ಪಠಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ‘ಹನುಮ ಚಾಲಿಸ ನಾವು ದಿನಾ ಮಾಡುತ್ತೇವೆ. ಅವರೊಬ್ಬರೇನಾ ಮಾಡೋದು. ಹಿಂದಿನ RSS ಬೇರೆ, ಈಗಿನ RSS ಬೇರೆ ಎಂದಿದ್ದಾರೆ. ಕುಂಬಳ ಕಾಯಿ ಕಳ್ಳ ಅಂದ್ರೆ, ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ. ಮೊದಲು ನೀವು ದೇಶ ಉಳಿಸಿ, ಆಯನೂರು ಮಂಜುನಾಥ್ ಏನ್ ಹೇಳಿದ್ರು. ಈಶ್ವರಪ್ಪಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಹೇಳಿ? ನಮ್ಮ ಗ್ಯಾರಂಟಿ ಕಾರ್ಡ್ ಐತಿಹಾಸಿಕವಾದದ್ದು, ನಮ್ಮ ಗ್ಯಾರಂಟಿ ನಾವು ಕೊಟ್ಟೇ ಕೊಡ್ತೀವಿ. ಬಿಜೆಪಿ ಅವರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ವರ್ಕ್ ಆಗೊಲ್ಲ. ನಾನು ಹಿಂದೂ, ನಾನು ಆಂಜನೇಯ ಭಕ್ತ, ರಾಮನ ಭಕ್ತ. ಬಿಜೆಪಿಯವರು ಏನು ಮಾಡಿಕೊಳ್ಳಲಿ. ನಮಗೆ 141ಸೀಟು ಬರೋದು ಪಕ್ಕಾ ಎಂದರು.