ಪುತ್ತೂರು: ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ದಿನೇಶ್ ಗೌಡ (25) ಪ್ರಜ್ವಲ್ (23) ನಿಶಾಂತ್ ಕುಮಾರ್ (19) ಮತ್ತು ಪ್ರದೀಪ್ (19) ಬಂಧಿತ ಆರೋಪಿಗಳು.
ಹಲ್ಲೆಯಿಂದ ಪರ್ಲಡ್ಕ ಗೋಲಿಕಟ್ಟೆ ನಿವಾಸಿ ಮಹಮ್ಮದ್ ಫಾರಿಸ್ (20) ಗಂಭೀರ ಗಾಯಗೊಂಡಿದ್ದು, ಯುವಕನಿಗೆ ಒಂದು ಕಿವಿ ಕೇಳಿಸದಂತಾಗಿದೆ ಎಂದು ತಿಳಿದು ಬಂದಿದೆ. ಹಿಂದೂ ಯುವತಿಯೊಂದಿಗೆ ಮಾತನಾಡುತ್ತಿದ್ದ ಎಂದು ಆರೋಪಿಸಿದ ಸಂಘಪರಿವಾರದ ಕಾರ್ಯಕರ್ತರು ಮಹಮ್ಮದ್ ಫಾರಿಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.