ಹೈದರಾಬಾದ್ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ಮಹಾಮಾರಿ ನಮ್ಮೊಂದಿಗೆ ಇನ್ನೆಷ್ಟು ದಿನಗಳ ಕಾಲ ಜೀವಿಸಬಹುದೆಂಬ ಆತಂಕದ ನಡುವೆಯೇ ಹೈದರಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಪ್ರೊಫೆಸರ್ ಜಿವಿಎಸ್ ಮೂರ್ತಿ ಮಾಹಿತಿಯೊಂದನ್ನು ನೀಡಿದ್ದಾರೆ.
ಕೋವಿಡ್ ಸೋಂಕು ಶೀತಜ್ವರದ ರೀತಿಯಲ್ಲಿ ಪೀಳಿಗೆಗಳ ವರೆಗೆ ನಮ್ಮೊಂದಿಗೇ ಇರಲಿದೆ, ಆಯಾ ರಾಜ್ಯಗಳು ನೀಡಿರುವ ಮಾಹಿತಿಗಳ ಪ್ರಕಾರ ಜೂನ್ ತಿಂಗಳ ಅಂತ್ಯದ ವೇಳೆಗೆ ಕೊರೋನಾ ಪ್ರಕರಣಗಳು ಕಡಿಮೆಯಾಗಲಿದ್ದು. ಉತ್ತರ ಹಾಗೂ ಪೂರ್ವ ಭಾರತದಲ್ಲಿ ಜುಲೈ ಮಧ್ಯದ ವೇಳೆಗೆ ಕೊರೋನಾ ಪ್ರಕರಣಗಳು ಕುಸಿಯಲಿದೆ ಎಂದು ಜಿವಿಎಸ್ ಮೂರ್ತಿ ಹೇಳಿದ್ದಾರೆ.
ಅದೇ ರೀತಿ ದೇಶದಲ್ಲಿ ಕೋವಿಡ್-19 ಹೆಚ್ಚಳಕ್ಕೆ ಸಾಂಕ್ರಾಮಿಕದ ಅವಧಿಯಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಯೇಜನೆಯೇ ಕಾರಣ ಎಂದು ಪ್ರೊಫೆಸರ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.