ಮಾಯಾವತಿ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದ ನಟ ರಣದೀಪ್‌ ವಿಶ್ವಸಂಸ್ಥೆ ರಾಯಭಾರಿ ಸ್ಥಾನದಿಂದ ವಜಾ

Prasthutha|

ನವದೆಹಲಿ : ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ರಣದೀಪ್‌ ಹೂಡಾ ಅವರ ಹಳೆಯ ವೀಡಿಯೊವೊಂದು ವೈರಲ್‌ ಆಗಿರುವ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇಧಗಳ ಸಂರಕ್ಷಣೆ (ಸಿಎಂಎಸ್)‌ ರಾಯಭಾರಿ ಸ್ಥಾನದಿಂದ ವಜಾಗೊಳಿಸಲಾಗಿದೆ.   

- Advertisement -

ರಣದೀಪ್‌ ಹೂಡಾ ಅವರು ಸುಮಾರು ಒಂಬತ್ತು ವರ್ಷಗಳ ಹಿಂದೆ ಮಾಯಾವತಿ ಕುರಿತು ಮಾಡಿದ್ದ ಅವಹೇಳನಕಾರಿ ʼಜೋಕ್‌ʼ ಒಂದು ಈಗ ವಿವಾದಿತವಾಗಿದೆ. ಈ ವೀಡಿಯೊ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಿಂದಾಗಿ ರಣದೀಪ್‌ ಅವರನ್ನು ಸಿಎಂಎಸ್‌ ರಾಯಭಾರಿ ಸ್ಥಾನದಿಂದ ವಜಾ ಮಾಡಲಾಗಿದೆ.

ಒಂಬತ್ತು ವರ್ಷಗಳ ಹಿಂದೆ ಮಾಧ್ಯಮ ಸಂಸ್ಥೆಯೊಂದು ನಡೆಸಿದ್ದ ಸಂದರ್ಶನದಲ್ಲಿ ಮಾತನಾಡುವಾಗ ರಣದೀಪ್‌ ನೀಡಿರುವ ಹೇಳಿಕೆ ವಿವಾದಿತವಾಗಿದೆ. ರಣದೀಪ್‌ ವೀಡಿಯೊದಲ್ಲಿ ಮಾಯಾವತಿ ಬಗ್ಗೆ ತಮಾಷೆ ಮಾಡುತ್ತಾನೆ ಮತ್ತು ಪ್ರೇಕ್ಷಕರೊಂದಿಗೆ ನಗುತ್ತಾನೆ. ಈ ವೀಡಿಯೊ ಇತ್ತೀಚೆಗೆ ಟ್ವೀಟರ್‌ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ವೀಡಿಯೊದಲ್ಲಿನ ಹೇಳಿಕೆ ಆಕ್ರಮಣಕಾರಿ ಎಂದು ಸಂಸ್ಥೆ ಭಾವಿಸಿದೆ ಮತ್ತು ರಣದೀಪ್‌ ಇನ್ನುಮುಂದೆ ರಾಯಭಾರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸಿಎಂಎಸ್‌ ಕಾರ್ಯಾಲಯ ತಿಳಿಸಿದೆ.

Join Whatsapp