“ವೇದಿಕೆಯ ಮೇಲೆ ಐದು ಜನ ಬಿಜೆಪಿ ಮುಖಂಡರು. ಅದರಲ್ಲೊಬ್ಬ ಭಾಷಣ ಮಾಡುತ್ತಿದ್ದಾರೆ. ಎದರುಗಡೆ ನೂರಾರು ಖಾಲಿ ಕುರ್ಚಿಗಳು, ಒಬ್ಬನೇ ಒಬ್ಬ ಪ್ರೇಕ್ಷಕ ಕೊಡೆಹಿಡಿದು ಕುಳಿತಿದ್ದಾನೆ” ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿಗರ ಕಾಲೆಳಿದಿದ್ದಾರೆ.
“ಐದು ಜನ ವೇದಿಕೆಯಲ್ಲಿದ್ದಾರೆ. 7 ಜನ ಮುಖಂಡರ ಚಿತ್ರಗಳು ಪೋಸ್ಟರ್‌ನಲ್ಲಿವೆ. ಒಬ್ಬನೇ ಪ್ರೇಕ್ಷಕ. ಅಲ್ಲದೆ ಇದು ಕೇರಳವೂ ಅಲ್ಲ.. ಬಿಜೆಪಿ ಪಕ್ಷದ ಕತೆ ಮುಗಿಯಿತು” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಇದೇ ಫೋಟೊವನ್ನು ಟ್ವೀಟ್ ಮಾಡಿರುವ ಗಬ್ಬರ್ ಎಂಬ ಪೇಜ್ ನಲ್ಲಿ ” ಪಶ್ಚಿಮ ಬಂಗಾಳ ಚುನಾವಣೆಯ ಬಿಜೆಪಿಯ ಬೃಹತ್ ರ‍್ಯಾಲಿ” ಎಂಬ ಶೀರ್ಷಿಕೆ ನೀಡಿ ವ್ಯಂಗ್ಯವಾಡಿದ್ದಾರೆ.
ಬಂಗ್ಲರ್ ಗೊರ್ಬೊ ಮಮತ ಎಂಬ ಅಧಿಕೃತ ಟ್ವಟರ್ ಖಾತೆಯಿಂದಲೂ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ಇದು ಪಶ್ಚಿಮ ಬಂಗಾಳ ಬಿಜೆಪಿಯ ಪರಿಸ್ಥಿತಿ. ಬಂಗಾಳ ಬಿಜೆಪಿಯನ್ನು ತಿರಸ್ಕರಿಸುತ್ತಿದೆ ಎಂದು ಬರೆಯಲಾಗಿದೆ. ಈ ಚಿತ್ರವನ್ನು ಅನೇಕರು ಹಂಚಿಕೊಂಡಿದ್ದಾರೆ.
ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರವರ ಭಾವಚಿತ್ರಗಳನ್ನು ಹಾಕಲಾಗಿದೆ. ಈ ಚಿತ್ರವನ್ನು ನೋಡುವಾಗ ಬಂಗಾಳದಲ್ಲಿ ಬಿಜೆಪಿ ರ‍್ಯಾಲಿಗೆ ಜನವೇ ಇಲ್ಲ ಎಂಬುದು ನಾವು ಅರ್ಥ ಮಾಡಿಕೊಳ್ಳಬಹುದು.