ಅಕ್ಟೋಬರ್ 15 ರಿಂದ ವೆಲ್ಫೇರ್ ಪಾರ್ಟಿ ಸದಸ್ಯತ್ವ ನೋಂದಣಿ ಅಭಿಯಾನ

Prasthutha|

ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ ಆರಂಭವಾಗಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ 31 ಅಕ್ಟೋಬರ್ ರವರೆಗೆ ನಡೆಯಲಿದೆ. ಸದಸ್ಯತ್ವ ನೋಂದಣಿ ಅಭಿಯಾನ ಪ್ರಕ್ರಿಯೆ ಮೇಲುಸ್ತುವಾರಿ ಸಮಿತಿಯ ಸಂಚಾಲಕ ಹೊಣೆಯನ್ನೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ನಿಬಾಯಿಸಲಿದ್ದಾರೆ.

- Advertisement -


ಇಂದು ಭಾರತದಲ್ಲಿ ಸುಮಾರು 2300 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ, ಕೆಲವು ಕೋಮು ಆಧಾರಿತ ಪಕ್ಷಗಳಾಗಿವೆ. ಕೆಲವು ಕುಟುಂಬ ಆಧಾರಿತವಾದರೆ ಇನ್ನು ಕೆಲವು ಸ್ವಪ್ರತಿಷ್ಠೆಗಾಗಿ ಹುಟ್ಟಿಕೊಂಡ ಪಕ್ಷಗಳಾಗಿವೆ ಎಂದರು.ಹೀಗೆ ಹಲವು ಕಾರಣಗಳಿಗಾಗಿ ಹುಟ್ಟಿಕೊಂಡ ಪಕ್ಷಗಳಿಗೆ ದೇಶದ ಅಭಿವೃದ್ಧಿ, ಜನಸಾಮನ್ಯರ ಸಮಸ್ಯೆ ಗಳು ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಬಡತನ, ನಿರುದ್ಯೋಗ, ಕೆಲವರ್ಗದವರ ಮೇಲೆ ದೌರ್ಜನ್ಯ, ಹೀಗೆ ಹಲವಾರು ಸಮಸ್ಯೆ ಗಳು ಇನ್ನು ಕಾಡುತ್ತಿವೆ, ಕೇವಲ ಕೈ ಬದಲಾವಣೆ ಆಗಿದೆ ಹೊರತು ಆಡಳಿತ ಶೈಲಿ ಯಲ್ಲಿ ಬದಲಾವಣೆಯಾಗಿಲ್ಲ . ಇವೆಲ್ಲವುಗಳಿಂದ ಜನರಿಗೆ ಬೇಸರ ಹುಟ್ಟಿದೆ ಎಂದರು.


ಈ ಸದಸ್ಯತ್ವ ಮಿಸ್ಡ್ ಕಾಲ್ (9482874767) ಮೂಲಕ ನೋಂದಾಯಿಸಬಹುದು ಹಾಗೂ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯ ವಹಿಸಲಿದ್ದಾರೆ. ಆದ್ದರಿಂದ ವೆಲ್ಫೇರ್ ಪಕ್ಷದ ಕಲ್ಯಾಣ ಭಾರತದ (Welfare state) ಕನಸನ್ನು ನನಸಾಗಿಲು ಈ ಪಕ್ಷವನ್ನು ಬೆಂಬಲಿಸಿ ಇದರ ಸದಸ್ಯರಾಗಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ವೆಲ್ಫೇರ್ ಪಾರ್ಟಿ ಮಹಿಳಾ ವಿಭಾಗ ರಾಜ್ಯಾಧ್ಯಕ್ಷರಾದ ತಲತ್ ಯಾಸ್ಮಿನ್ ಮತ್ತಿತರರು ಹಾಜರಿದ್ದರು.

- Advertisement -

Join Whatsapp