ವೀಕೆಂಡ್ ಕರ್ಫ್ಯೂ | ದ.ಕ. ಜಿಲ್ಲಾಧಿಕಾರಿಗಳ ಅಧಿಕೃತ ಆದೇಶದಲ್ಲೇನಿದೆ?

Prasthutha|

ಮಂಗಳೂರು : ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕೃತ ಆದೇಶ ಪ್ರಕಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಆಗಸ್ಟ್ 16ರ ತನಕ ಈ ಮಾರ್ಗಸೂಚಿ ಜಾರಿಯಲ್ಲಿರಲಿದೆ ಎಂದು ತಿಳಿದು ಬಂದಿದೆ.

- Advertisement -

ಜಿಲ್ಲಾಧಿಕಾರಿಗಳ ಆದೇಶ ಈ ಕೆಳಗಿನಂತಿದೆ :

ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆ. 5ರ ತನಕ ವಾರಾಂತ್ಯ ಕರ್ಫ್ಯೂ.
ಬೆಳಗ್ಗೆ 5ರಿಂದ ಮಧ್ಯಾಹ್ನ 2ರ ತನಕ ಅಗತ್ಯ ವಸ್ತುಗಳು ಲಭ್ಯ.
ದಿನಸಿ, ಮೀನು, ಮಾಂಸ, ಹಣ್ಣು, ತರಕಾರಿ, ಹಾಲಿನ ಬೂತ್, ಪ್ರಾಣಿಗಳ ಮೇವು ಲಭ್ಯ.
ಬೀದಿ ಬದಿ ವ್ಯಾಪಾರ, ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ.
ಮದ್ಯದಂಗಡಿಗಳಲ್ಲಿ ಮಧ್ಯಾಹ್ನ 2ರ ತನಕ ಪಾರ್ಸೆಲ್ ಗೆ ಮಾತ್ರ ಅವಕಾಶ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸೆಲ್, ಹೋಂ ಡೆಲಿವರಿಗೆ ಅವಕಾಶ.
ಬಸ್, ರೈಲು, ವಿಮಾನ ಪ್ರಯಾಣಕ್ಕೆ ಅನುಮತಿ.
ಖಾಸಗಿ,KSRTC ಬಸ್ ಸಂಚಾರಕ್ಕೆ ಅವಕಾಶ.
ಮದುವೆಗೆ ಗರಿಷ್ಠ 50 ಜನ, ಸ್ಥಳೀಯಾಡಳಿತದ ಅನಿಮತಿ ಕಡ್ಡಾಯ.
ಅಂತ್ಯ ಸಂಸ್ಕಾರ ಗರಿಷ್ಠ 20 ಜನರಿಗೆ ಅವಕಾಶ.
ಆ. 16ರ ತನಕ ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನಕ್ಕೆ ಅವಕಾಶ, ಸೇವೆ ಇಲ್ಲ.
ವಾರಾಂತ್ಯ ಕರ್ಫ್ಯೂ ಸಂದರ್ಭ ಈ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧ.
ಸಾಮಾಜಿಕ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಉತ್ಸವ ನಿರ್ಬಂಧ.
ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅಧಿಕೃತ ಆದೇಶ.



Join Whatsapp