ವಾರಾಂತ್ಯ ಕರ್ಪ್ಯೂಗೆ ಸಜ್ಜಾದ ದ.ಕ ಜಿಲ್ಲೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ವೀಕೆಂಡ್ ಕರ್ಫ್ಯೂವನ್ನು ಈ ತಿಂಗಳಾಂತ್ಯದವರೆಗೆ ಮುಂದುವರಿಸಲಾಗಿದೆ, ಅದರಂತೆ ಆಗಸ್ಟ್ 20 ರ ರಾತ್ರಿಯಿಂದ ಆಗಸ್ಟ್ 23 ರ ಬೆಳಗ್ಗಿನವರೆಗೆ ವೀಕೆಂಡ್ ಕರ್ಪ್ಯೂವನ್ನು  ವಿಧಿಸಲಾಗಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಪಬ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್  ಗಳನ್ನು ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7 ಗಂಟೆಗೆ ಕಡ್ಡಾಯವಾಗಿ ಮುಚ್ಚಬೇಕು ಮತ್ತು ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿಧಿಸಿರುವ ರಾತ್ರಿ ಕರ್ಪ್ಯೂ ಸೇರಿದಂತೆ ವಾರಾಂತ್ಯ ಕರ್ಪ್ಯೂ ವನ್ನು ಆಗಸ್ಟ್ 30 ರ ತನಕ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಡಾ . ಕೆ.ವಿ. ರಾಜೇಂದ್ರ ಆಗಸ್ಟ್ 14 ರಂದು ಆದೇಶ ಮಾಡಿದ್ದಾರೆ.

ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗಿನವರೆಗೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು , ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ . ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ , ತುರ್ತು ಸೇವೆಗೆ ಅನುಮತಿ ನೀಡಲಾಗಿದೆ . ಮದ್ಯ ದಂಗಡಿಗಳು ಮತ್ತು ಮಳಿಗೆಗಳು ಪಾರ್ಸೆಲ್ ಕೊಂಡೊಯ್ಯಲು ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Join Whatsapp