ಸಾರ್ವಜನಿಕವಾಗಿ ಮಹಿಳೆಯರ ಒಳ ಉಡುಪು ಧರಿಸಿ ಅಶ್ಲೀಲ ವೀಡಿಯೋ ಚಿತ್ರೀಕರಣ| ಇಬ್ಬರ ಬಂಧನ

Prasthutha|

ತಿರುವನಂತಪುರಂ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಒಳ ಉಡುಪು ಧರಿಸಿ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ತಿರುವನಂತಪುರಂ ಜಿಲ್ಲೆಯ ಅಟಿಙಲ್ ಮೂಲದ ಅರ್ಜುನ್ ಮತ್ತು ಶಮೀರ್ ಬಂಧಿತರು.

ಪ್ಯಾಂಟ್ ಮೇಲೆ ಮಹಿಳೆಯರ ಒಳಉಡುಪು ಧರಿಸಿದ್ದ ಅರ್ಜುನ್ ಬಸ್ ಸ್ಟ್ಯಾಂಡ್, ಟೀ ಅಂಗಡಿ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಚೇಷ್ಟೆ ಮಾಡುತ್ತಾ ತಿರುಗಾಟ ನಡೆಸಿದ್ದಾನೆ. ಅಶ್ಲೀಲವಾಗಿ ಕಾಣುತ್ತಿದ್ದ ಈ ದೃಶ್ಯದ ವಿರುದ್ಧ ಸ್ಥಳೀಯರು ಪ್ರತಿಕ್ರಿಯಿಸಿದರೂ ಆತ ಕ್ಯಾರೇ ಅನ್ನಲಿಲ್ಲ ಎನ್ನಲಾಗಿದೆ.

- Advertisement -

ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಬಂದ ಬಳಿಕವೂ ಅರ್ಜುನ್ ತನ್ನ ಚೇಷ್ಟೆ ಮುಂದುವರಿಸಿದ್ದು, ನಾವು ಫ್ರಾಂಕ್ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದೇವೆ. ಪಕ್ಕದಲ್ಲೇ ಕಾರಿನಲ್ಲಿ ಕ್ಯಾಮರಾ ಹಿಡಿದ ಸ್ನೇಹಿತ ಇದ್ದಾನೆ ಎಂದು ಅರ್ಜುನ್ ಪೊಲೀಸರಿಗೆ ತಿಳಿಸಿದ್ದಾನೆ.

ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

Join Whatsapp