ಮುಸಲ್ಮಾನರ ಮನಸ್ಥಿತಿ ಬದಲಾಗದಿದ್ದರೆ ನಾವು ಒಪ್ಪುವುದಿಲ್ಲ: ಈಶ್ವರಪ್ಪ

Prasthutha|

ಶಿವಮೊಗ್ಗ: ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು. ಮತ್ತೆ ಹಿಜಾಬ್ ಸಮಸ್ಯೆ ಸೃಷ್ಟಿಸುವ ಕೆಲಸವನ್ನು ಕೆಲವರು ರಾಜ್ಯದಲ್ಲಿ ಮಾಡುತ್ತಿದ್ದು, ಅವರ ಮನಸ್ಥಿತಿ ಹಾಗೇ ಇರುವುದರಿಂದ ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಇತ್ತೀಚೆಗೆ 40% ಕಮಿಷನ್ ವಿಚಾರದಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

- Advertisement -

ಮಂಗಳೂರಿನಲ್ಲಿ ಮತ್ತೆ ನಡೆದ ಹಿಜಾಬ್ ಪ್ರಕರಣದ ಕುರಿತು ಮಾತನಾಡಿದ ಅವರು, ನೀವು ಭಾರತದ ಸಂಸ್ಕೃತಿಗೆ ತಕ್ಕಂತೆ ಹೊಂದಾಣಿಕೆಯಾಗಬೇಕು. ಆಗದಿದ್ದರೆ ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದರು. ಕೋರ್ಟ್, ಸಂವಿಧಾನ, ಸರ್ಕಾರ ಹಾಗೂ ಸರ್ಕಾರದ ಕಾನೂನಿಗೆ ಬೆಲೆ ಕೊಡಬೇಕು. ಮುಸಲ್ಮಾನರು ದೇಶದ ಕಾನೂನು ವಿರುದ್ಧವಾಗಿ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಇರಬೇಕಾದರೇ ಕಾನೂನು, ಸಂವಿಧಾನಕ್ಕೆ ಬೆಲೆ ಕೊಡಲೇಬೇಕು ಎಂದು ಹೇಳಿದ್ದಾರೆ.

ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಈಶ್ವರಪ್ಪ ಮತ್ತೆ ಕೋಮು ಆಧಾರಿತವಾಗಿ ಮಾತನಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ಈಶ್ವರಪ್ಪ ಕೇಳಿದ 40 ಪರ್ಸೆಂಟ್ ಕಮಿಷನ್ ಕೊಡಕ್ಕಾಗದೇ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡ್ಕೊಂಡಿದ್ದರು. ಜನರ ದುಡ್ಡಿನಿಂದ ಮಾಡುವ ಕೆಲಸಗಳಿಗೆ 40 ಶೇಕಡಾ ಕಮಿಷನ್ ಕೇಳುತ್ತಿದ್ದಾರೆಂದು ಗುತ್ತಿಗೆದಾರರ ಸಂಘವೂ ಆರೋಪ ಮಾಡಿತ್ತು. ವಿಷಯ ಗಂಭೀರವಾದಾಗ ರಾಜೀನಾಮೆ ನೀಡಿದ್ದರು.

Join Whatsapp