ಹಿಜಾಬ್ ವಿವಾದ: ಎಜಿ ಸಲಹೆ ಪಡೆದು ಕೋರ್ಟ್ ನಲ್ಲಿ ನಿಲುವು ತಿಳಿಸುತ್ತೇವೆ: ಬಿ.ಸಿ.ನಾಗೇಶ್

Prasthutha|

ಬೆಂಗಳೂರು: ಹಿಜಾಬ್ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ವಿಷಯದ ಬಗ್ಗೆ ಕಾನೂನು ತಜ್ಞರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಎಜಿಯವರ ಸಲಹೆ ಪಡೆದು ಕೋರ್ಟ್ ನಲ್ಲಿ ನಮ್ಮ ನಿಲುವು ತಿಳಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿಗೆ ಸಮವಸ್ತ್ರ ನಿಯಮ ಮಾಡಲು ಅವಕಾಶವಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ನಿಯಮ ಮಾಡಲಾಗಿದೆ. ಕೋರ್ಟ್ ತೀರ್ಪು ಬರುವತನಕ ಈಗಿರುವ ನಿಯಮವನ್ನೇ ಮಕ್ಕಳು ಪಾಲನೆ ಮಾಡಬೇಕು. ಒಳ್ಳೆಯ ಕಾಲೇಜು ಆದುದರಿಂದ ವಿದ್ಯಾರ್ಥಿಗಳು ಅಲ್ಲಿಗೆ ಸೇರಿದ್ದಾರೆ. ಈಗ ಯಾರದ್ದೋ ಕುಚೋದ್ಯದಿಂದ ಈ ರೀತಿಯ ಘಟನೆ ನಡೆಯುತ್ತಿದೆ. ಡಿಸೆಂಬರ್ ನವರೆಗೂ ಎಲ್ಲವೂ ಸರಿ ಇತ್ತು. ಈಗ ವಿವಾದ ಮಾಡಿದ್ದಾರೆ ಎಂದರು.

ನಮ್ಮ ರೂಲ್ಸ್ ಗೆ ಪೂರಕವಾಗಿ ಅನೇಕ ಕೋರ್ಟ್ ತೀರ್ಪುಗಳಿವೆ. ಕೇರಳ ಮತ್ತು ಮುಂಬೈ ಕೋರ್ಟ್ ಹಿಜಾಬ್ ಹಾಕಬಾರದು ಎಂದು ಹೇಳಿದೆ. ಸಿದ್ದರಾಮಯ್ಯ ಸ್ವತಃ ವಕೀಲರಾಗಿದ್ದಾರೆ. ಐದು ವರ್ಷ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಆಳಿದ್ದಾರೆ. ಸಂವಿಧಾನದ ಬಗ್ಗೆ ಓದಿಕೊಂಡಿರುವವರು. ಅವರು ಸಹ ಸುಳ್ಳು ಹೇಳ್ತಿದ್ದಾರಾ? ಅವರು ಓಟ್ ಬ್ಯಾಂಕ್ ಗೆ ಇಳಿದುಬಿಟ್ರಾ?. ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಓದಿ ಎಂದು ನಾನು ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.

- Advertisement -

1985 ರಲ್ಲಿ ಕಾಲೇಜಿನ ಸಮವಸ್ತ್ರ ಬಂದಿದೆ. ಈ ಮಕ್ಕಳು ಒಂದೂವರೆ ವರ್ಷಗಳಿಂದ ನಿಯಮ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಜನವರಿಯಿಂದ ವಿರೋಧ ಮಾಡುತ್ತಿದ್ದಾರೆ. ಕಳದೊಂದು ತಿಂಗಳಿಂದ ಮನವರಿಕೆ ಮಾಡಲಾಗುತ್ತಿದೆ. ಸರ್ಕಾರ ಕೂಡ ನಿರ್ದೇಶನ ನೀಡಿದೆ. ಯೂನಿಫಾರಂ ಹಾಕಿಕೊಂಡು ಬಂದರೆ ಮಾತ್ರ ಒಳಗಡೆ ಬಿಡಲು ಸೂಚನೆ ನೀಡಲಾಗಿದೆ. ನಿಯಮ ಪಾಲನೆ ಮಾಡಿದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು ಎಂದರು.

Join Whatsapp