ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣ ಒದಗಿಸ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಬೆಂಗಳೂರು: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದ್ದಾರೆ.

- Advertisement -


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನೂತನ 262 ಅಂಬುಲೆನ್ಸ್ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಾರೂ ಚಿಕಿತ್ಸೆ ಸಿಗದೇ ಸಾಯಬಾರದು. ಅಪಘಾತ ವೇಳೆ, ಹೆರಿಗೆ ವೇಳೆ ಚಿಕಿತ್ಸೆ, ಹೃದಯಾಘಾತ ಹೀಗೆ ಆದಾಗ ಚಿಕಿತ್ಸೆ ಸಿಗದೇ ಸಾಯಬಾರದು. ಅದಕ್ಕಾಗಿಯೇ 2008 ರಲ್ಲಿ ತುರ್ತು ಆರೋಗ್ಯಸೇವೆ ತರಲಾಯ್ತು. 236 ತಾಲೂಕುಗಳಿದ್ದು, ತಲಾ ನಾಲ್ಕರಂತೆ ಕನಿಷ್ಟ 840 ಅಂಬುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದರೆ ಬಹಳ ಅನುಕೂಲ ಆಗುತ್ತೆ ಎಂದು ಹೇಳಿದರು.

Join Whatsapp