ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ, ನಿಮಗೆ ತಾಕತ್ತಿದ್ದರೆ ತಡೀರಿ: ಪ್ರಮೋದ್ ಮುತಾಲಿಕ್

Prasthutha|

ಹುಬ್ಬಳ್ಳಿ: ಭಾರತ ಹಿಂದೂ ರಾಷ್ಟ್ರ ಆಗುತ್ತದೆ. ನಿಮಗೆ (ಕಾಂಗ್ರೆಸ್) ತಾಕತ್ತಿದ್ದರೆ ತಡೀರಿ ಎಂದು ಶ್ರೀ ರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

ಆರೋಪಿ ಶ್ರೀಕಾಂತ ಪೂಜಾರಿ ಅವರ ಮನೆಗೆ ಗುರುವಾರ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ, ಸುದ್ದಿಗಾರರ ಜೊತೆ ಮಾತನಾಡಿದರು.

2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ ನಂತರ ಭಾರತ ಹಿಂದೂ ರಾಷ್ಟ್ರ ಆಗುತ್ತದೆ. ಪಾಕಿಸ್ತಾನ ಮುಸ್ಲಿಮರ ದೇಶ ಆಗುವುದಾದರೆ ಭಾರತ ಹಿಂದೂ ರಾಷ್ಟ್ರ ಏಕಾಗಬಾರದು ಎಂದು ನುಡಿದರು. ಇಲ್ಲಿ ಎಲ್ಲರೂ ವಾಸ ಮಾಡಬಹುದು. ಮುಸ್ಲಿಮರು, ಕ್ರೈಸ್ತರು ಇರಬಹುದು. ನಾವು ಯಾರನ್ನೂ ಹೊರಹಾಕಲ್ಲ ಎಂದರು.

Join Whatsapp