ನಮ್ಮ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತ ಮಾಡುತ್ತೇವೆ: ಜಿ.ಪರಮೇಶ್ವರ್‌

Prasthutha|

ಬೆಳಗಾವಿ: ನಾವು ಯಾರಿಗೂ ಬರಬೇಡಿ ಅಂತ ಹೇಳಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬರೋದಾದರೆ ಬರಲಿ, ಅವರನ್ನ ನಾವು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

- Advertisement -

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರು ಯಾರು ಬರುತ್ತಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಬರ್ತಾರೆ ಎನ್ನುವ ಮಾತಿದೆ. ಬರುವವರನ್ನ ನಾವು ಕರೆದುಕೊಳ್ಳುತ್ತೇವೆ ಎಂದರು.

135 ಶಾಸಕರಿದ್ದರೂ ಬೇರೆ ಶಾಸಕರ ಅವಶ್ಯಕತೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವಶ್ಯಕತೆ ಪ್ರಶ್ನೆ ಇಲ್ಲ. ಅವರು ನಮ್ಮ ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ದಾಂತ ಒಪ್ಪುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಬೇಕಾಗುತ್ತದೆ ಎಂದು ತಿಳಿಸಿದರು.

- Advertisement -

ಕಿರುಕುಳ ಕೊಡ್ತಿದ್ದಾರೆ ಎಂಬ ಶಿವರಾಮ್ ಹೆಬ್ಬಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮಲ್ಲಿಂದ ಹೋದ ಕೆಲವರಿಗೆ ಅಸಮಾಧಾನ ಆಗಿದೆ ಎಂಬುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಅದು ಸತ್ಯವಾಗಿದ್ದರೆ ಬಿಜೆಪಿ ಬಿಟ್ಟು ಬರಬಹುದು. ಪಕ್ಷ ಬಿಟ್ಟು ಹೋದವರು ನಿಮ್ಮನ್ನ ಸಂಪರ್ಕ ಮಾಡಿದ್ದಾರಾ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಅಧ್ಯಕ್ಷರನ್ನು ಸಂಪರ್ಕ ಮಾಡಿರಬಹುದು ಎಂದು ಹೇಳಿದರು.

ಸರ್ಕಾರ ಉಳಿಸಲು ಕಾಂಗ್ರೆಸ್ ಆಪರೇಷನ್ ಅನಿವಾರ್ಯತೆ ವಿಚಾರಕ್ಕೆ ಅನಿವಾರ್ಯತೆ ಏನಿಲ್ಲ. ನಾವೇನೂ ಯಾವುದೇ ಆಪರೇಷನ್ ಮಾಡ್ತಿಲ್ಲ. ಅವರು ರಾಜೀನಾಮೆ ಕೊಟ್ಟು ಪಕ್ಷ ಸೇರುತ್ತೇವೆ ಅಂದಾಗ ಬೇಡ ಎನ್ನಲ್ಲ ಎಂದರು.

ದಲಿತ ಸಿಎಂ ಕೂಗು ವಿಚಾರಕ್ಕೆ ರಾಜ್ಯದಲ್ಲಿ ಈಗ ಸುಭದ್ರ ಕಾಂಗ್ರೆಸ್ ಸರ್ಕಾರವಿದೆ. ನಾವೀಗ ಐದು ಗ್ಯಾರಂಟಿ ಜಾರಿ ಮೂಲಕ ಜನಸಾಮಾನ್ಯರಿಗೆ ಕೊಟ್ಟ ಬೇಡಿಕೆ ಈಡೇರಿಸುತ್ತಿದ್ದೇವೆ. ಆಗಾಗ ಇಂತಹ ಮಾತುಗಳು ಕೇಳಿ ಬರಬಾರದು ಎಂದು ಮಾತನಾಡಿದರು.

ಹಿಂಡಲಗಾ ಜೈಲಿನಲ್ಲಿ ಅಕ್ರಮ, ಕೈದಿಗಳಿಗೆ ಕಿರುಕುಳ ವಿಚಾರದ ಬಗ್ಗೆ ಮಾತನಾಡಿ, ನಾನು ಕೇಳಿದ್ದೇನೆ. ಬೆಳಗಾವಿ ಹಿಂಡಲಗಾ ಜೈಲಿಗೆ ಭೇಟಿ ಮಾಡಿ ಪರಿಶೀಲಿಸಲಾಗುವುದು. ಕಳೆದ ಬಾರಿ ಗೃಹ ಸಚಿವ ಇದ್ದಾಗಲೂ ಹಿಂಡಲಗಾ ಜೈಲಿಗೆ ಭೇಟಿ ಕೊಟ್ಟಿದ್ದೆ. ಆಗ ಇಂತಹ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಈಗ ಇಂತಹ ಘಟನೆಗಳು ಹೊಸದಾಗಿ ಕೇಳಿಬರುತ್ತಿವೆ. ಸದ್ಯದಲ್ಲೇ ಭೇಟಿ ಕೊಟ್ಟು ಅಕ್ರಮಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇನೆ ಎಂದರು‌.

Join Whatsapp