ದ್ವಾರಕಾದಲ್ಲಿ ಹಜ್ ಭವನ ನಿರ್ಮಾಣ ಬೆಂಬಲಿಸಿ ಸ್ಥಳೀಯ ನಿವಾಸಿಗಳಿಂದ ಸಹಿ ಸಂಗ್ರಹ : ಹಿಂದುತ್ವ ಶಾಂತಿ ಭಂಜಕರಿಗೆ ಮುಖಭಂಗ !

Prasthutha|

ದೆಹಲಿ : ದೆಹಲಿಯ ದ್ವಾರಕಾದಲ್ಲಿ ನಿರ್ಮಾಣವಾಗಲಿರುವ ಹಜ್ ಭವನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗುವುದೆಂದು ಸ್ಥಳೀಯ ನಿವಾಸಿಗಳು ಘೋಷಿಸಿದ್ದಾರೆ. ಈ ಹಿಂದೆ ಹಜ್ ಭವನ ನಿರ್ಮಾಣಕ್ಕೆ ಅನುಮೋದಿಸದಂತೆ ಒತ್ತಾಯಿಸಿ ಗವರ್ನರ್ ಗೆ ಪತ್ರ ಬರೆದ ಬಲಪಂಥೀಯ ಹಿಂದುತ್ವ ಗುಂಪು ನಂತರ ದೆಹಲಿಯ ಜಂತರ್ ಮಂತರದಲ್ಲಿ ಹಜ್ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲಿ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿ ದೆಹಲಿಯಲ್ಲಿ ಮತ್ತೊಮ್ಮೆ ಶಾಂತಿ ಭಂಗ ಮಾಡುವ ಪ್ರಯತ್ನ ನಡೆಸಿದ್ದರು.

- Advertisement -

ಅಖಿಲ ದ್ವಾರಕಾ ರೆಸಿಡೆಂಟ್ಸ್ ಫೆಡರೇಶನ್ (ಎ.ಡಿ.ಆರ್.ಎಫ್) ನ ಆಯ್ದ ಕೆಲವು ಹಿಂದುತ್ವ ಪ್ರೇರಿತ ನಿವಾಸಿಗಳು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೆ ಕೋಮು ಪ್ರಚೋದನಕಾರಿಯಾದ ಪತ್ರ ಬರೆದ ಕ್ರಮವನ್ನು ಖಂಡಿಸಿ ಅಲ್ಲಿನ ನಿವಾಸಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಮಾತ್ರವಲ್ಲದೆ ಮುಸ್ಲಿಮರ ವಿರುದ್ಧ ಕೋಮು ಪ್ರಚೋದನೆಯ ಹೇಳಿಕೆ ಮೂಲಕ ಹಿಂಸೆಗೆ ಯತ್ನಿಸುತ್ತಿರುವ ಎ.ಡಿ.ಆರ್.ಎಫ್ ನೊಂದಿಗೆ ತನ್ನ ಭಿನ್ನಾಭಿಪ್ರಾಯವನ್ನು ಪ್ರಕಟಿಸಿ, ದ್ವಾರಕಾದಲ್ಲಿ ಹಜ್ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಳೀಯರು ಸುಮಾರು 100 ಮನೆಯಿಂದ ಸಹಿ ಸಂಗ್ರಹ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ ಬಲಪಂಥೀಯ ಹಿಂದುತ್ವ ಗುಂಪು ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದ್ವಾರಕಾದಲ್ಲಿ ಹಜ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿರುವ ಭೂಮಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿತ್ತು. ಮಾತ್ರವಲ್ಲದೆ ಜನರ ತೆರಿಗೆ ಹಣದಲ್ಲಿ ಹಜ್ ಭವನ ನಿರ್ಮಿಸುವುದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ಧಕ್ಕೆಯಾಗಲಿದೆ ಎಂದು ಹಿಂದುತ್ವ ಮತಾಂಧರು ಆರೋಪಿಸಿದ್ದರು.

- Advertisement -

ಬಲಪಂಥೀಯರ ನಡೆಗೆ ಪ್ರತಿಕ್ರಿಯಿಸಿರುವ ದ್ವಾರಕಾ ನಿವಾಸಿಗಳು, ಭಾರತ ಸರ್ಕಾರ ಹಿಂದೂಗಳ ಹಬ್ಬಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಅದೇ ರೀತಿಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸಬ್ಸಿಡಿಯನ್ನು ಮೀಸಲಿಡುತ್ತದೆ. ತೆರಿಗೆಯನ್ನು ಹಿಂದೂಗಳ ಜೊತೆಗೆ ಮುಸ್ಲಿಮರು ಪಾವತಿಸುತ್ತಿರುವಾಗ ಮುಸ್ಲಿಮ್ ಸಮುದಾಯದ ಶಿಕ್ಷಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಹಜ್ ಭವನ ನಿರ್ಮಾಣ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಬಲಪಂಥೀಯರಿಗೆ ತಿರುಗೇಟು ನೀಡಿದ್ದಾರೆ.

ಮಾತ್ರವಲ್ಲದೆ ಎ.ಡಿ.ಆರ್.ಎಫ್ ನ ಕೆಲವು ಸದಸ್ಯರು ರಾಜಕೀಯ ಪ್ರೇರಿತವಾಗಿ ಮುಸ್ಲಿಮರನ್ನು ಅವಹೇಳಿಸುವ ಮೂಲಕ ಅವರ ವಿರುದ್ಧ ದ್ವೇಷವನ್ನು ಹರಡಲಾಗುತ್ತಿದೆಯೆಂದು ದ್ವಾರಕಾ ನಿವಾಸಿಗಳು ದೂರಿದ್ದಾರೆ. ಮುಸ್ಲಿಮರ ಮೇಲೆ ದ್ವೇಷವನ್ನು ಹರಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ದ್ವಾರಕಾ ನಿವಾಸಿಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Join Whatsapp