ನಾವು ಜನರ ಮನಸ್ಸು ಗೆಲ್ಲಬೇಕು, ವೈಯಕ್ತಿಕವಾಗಿ ನಿಂದನೆ ಸರಿಯಲ್ಲ: ನಳಿನ್ ಗೆ ಸಿಎಂ ಕಿವಿಮಾತು

Prasthutha|

ಹುಬ್ಬಳ್ಳಿ: ನಾವು ಜನರ ಮನಸ್ಸು ಗೆಲ್ಲಬೇಕು, ವೈಯಕ್ತಿಕವಾಗಿ ನಿಂದನೆ ಸರಿಯಲ್ಲ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಕ್ಕೆ ಕಿವಿಮಾತು ಹೇಳಿದ್ದಾರೆ.

- Advertisement -

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಜನರ ಸಮಸ್ಯೆ, ಕ್ಷೇತ್ರಗಳ ಅಭಿವೃದ್ಧಿಯಂತಹ ವಿಚಾರಗಳ ಕುರಿತಂತೆ ಯೋಚಿಸಿ, ಬಗೆ ಹರಿಸೋ ಪ್ರಯತ್ನ ನಡೆಸಬೇಕು. ಅದನ್ನು ಬಿಟ್ಟು ವಾದಕ್ಕೆ ಬಿದ್ದವರಂತೆ ವಾದ ಮಾಡೋದು ಸರಿಯಲ್ಲ. ಮಾಧ್ಯಮಗಳು ಜನರ ಧ್ವನಿಯನ್ನು ಬಿಂಬಿಸುತ್ತಿವೆ ಎಂದು ಹೇಳಿದರು.



Join Whatsapp