ರಷ್ಯಾದ 12,000 ಸೈನಿಕರನ್ನು ಕೊಂದಿದ್ದೇವೆ; ಅಂಕಿ ಸಂಖ್ಯೆಗಳನ್ನು ಹಂಚಿಕೊಂಡ ಉಕ್ರೇನ್‌ ರಕ್ಷಣಾ ಸಚಿವಾಲಯ

Prasthutha|

ಕೀವ್‌: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಂನಿಂದ ಈ ವರೆಗೆ ರಷ್ಯಾದ ಸುಮಾರು 12,000 ಸೈನಿಕರನ್ನು ಹೊಡೆದುರುಳಿಸಿರುವುದಾಗಿ ಹೇಳಿರುವ ಉಕ್ರೇನ್‌ನ ರಕ್ಷಣಾ ಸಚಿವಾಲಯವು, ತನ್ನಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಅಂಕಿ ಸಂಖ್ಯೆಗಳನ್ನು ಹಂಚಿಕೊಂಡಿದೆ.

- Advertisement -

ರಷ್ಯಾದ 303 ಟ್ಯಾಂಕ್‌ಗಳು, 80 ಹೆಲಿಕಾಪ್ಟರ್‌ ಮತ್ತು 48 ಯುದ್ಧವಿಮಾನಗಳ ಸಹಿತ 120 ಕ್ಕೂ ಹೆಚ್ಚು ವಿಮಾನಗಳನ್ನು ಉಕ್ರೇನ್ ಮಿಲಿಟರಿ ನಾಶಪಡಿಸಿದೆ ಎಂದು ಹೇಳಲಾಗಿದೆ.

1,036 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು, 120 ಫಿರಂಗಿಗಳು, 56 ರಾಕೆಟ್‌ ಉಡಾವಣಾ ವ್ಯವಸ್ಥೆಗಳನ್ನೂಉಕ್ರೇನ್‌ನ ರಕ್ಷಣಾ ಪಡೆಗಳು ನಾಶಪಡಿಸಿವೆ ಎಂದು ತಿಳಿಸಲಾಗಿದೆ.

- Advertisement -

 ರಷ್ಯಾದ ಆಕ್ರಮಣದ ವಿರುದ್ಧದ ಉಕ್ರೇನ್‌ ಪ್ರತಿರೋಧವು ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಶಸಂಸೆಗೆ ಪಾತ್ರವಾಗಿದೆ.



Join Whatsapp